ಕೆನ್ ವುಡ್ ಸ್ಟಿರಿಯೋ ಹಾಕಿ ಹಾಡು ಕೇಳಿರಿ...

ಕಂಪನಿಯು ಭಾರತದ ಕಾರುಗಳಿಗಾಗಿ ಭಾರತದಲ್ಲಿ 20ಕ್ಕೂ ಹೆಚ್ಚು ಸಾಧನಗಳನ್ನು ಪರಿಚಯಿಸುವುದಾಗಿ ಕಳೆದ ಮೇ ತಿಂಗಳಲ್ಲೇ ಹೇಳಿತ್ತು. ಸ್ಟಿರಿಯೋ, ಸಿಡಿ/ಡಿವಿಡಿ ಪ್ರೇಯರ್ ಸೇರಿದಂತೆ ಹಲವು ಮನರಂಜನಾ ಸಾಧನಗಳನ್ನು ಹೊರತರುವ ಯೋಜನೆಯನ್ನು ಈ ಹಿಂದೆಯೇ ಪ್ರಕಟಿಸಿತ್ತು.
ಇಷ್ಟೇ ಅಲ್ಲದೇ ಕಾರು ಚಾಲನೆ ಮಾಡುವಾಗ ನಿಮಗೆ ದಾರಿ ತೋರಿಸುವ ನ್ಯಾವಿಗೇಷನ್ ಸಿಸ್ಟಮ್ ಗಳನ್ನೂ ಕೂಡ ಪರಿಚಯಿಸಲು ನಿರ್ಧರಿಸಿದೆ. ಇದರಲ್ಲಿ ಕೆಲವು ಸಾಧನಗಳನ್ನು ಮಾರುಕಟ್ಟೆಗೆ ಈಗಾಗಲೇ ಬಿಡುಗಡೆ ಮಾಡಿದೆ. ಉಳಿದ ಸಾಧನಗಳು ಮುಂದಿನ ಕೆಲವೇ ತಿಂಗಳಲ್ಲಿ ದೇಶಕ್ಕೆ ತಲುಪಲಿದೆಯಂತೆ!
ಕಂಪನಿ ಹೊಸದಾಗಿ ಏನೆಲ್ಲ ತರಲಿದೆ? ಡಬಲ್ ಡಿನ್ ನ್ಯಾವಿಗೇಷನ್ ಸಿಸ್ಟಮ್, ಎಚ್ ಕ್ಯೂಆರ್-ಸರಣಿಯ ಆಂಪ್ಲಿಪ್ಲೇಯರ್ಸ್, ಎಚ್ ಕ್ಯೂಆರ್-ಸರಣಿಯ ಸ್ಪೀಕರ್ ಗಳು ಸೇರಿದಂತೆ ಹಲವು ಸಾಧನಗಳು ಹೊರತರಲು ನಿರ್ಧರಿಸಿದೆ. ಇಷ್ಟು ಮಾತ್ರವಲ್ಲದೇ ಯುಎಸ್ ಬಿ ಕನೆಕ್ಟಿವಿಟಿ ಹೊಂದಿರುವ ಸಿಡಿ ಮತ್ತು ಡಿವಿಡಿ ರಿಸಿವರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಕಂಪನಿ ಹೇಳಿದೆ.


Click it and Unblock the Notifications








