ಕಾರು ಲೋಕದ ಒಂಬತ್ತು ಸೋಜಿಗ ತಿಳಿದುಕೊಳ್ಳಿ

* ಭಾರತದ ಟಾಟಾ ಮೋಟರ್ಸ್ ನ "ಟಾಟಾ ನ್ಯಾನೊ" ಜಗತ್ತಿನಲ್ಲಿಯೇ ಅಗ್ಗದ ಕಾರು.
* 1965ರ ವೇಳೆಗೆ ಹತ್ತು ಲಕ್ಷ ಮಾರಾಟವಾದ ಕಾರೆಂದರೆ ಷೆವರ್ಲೆ ಇಂಪಾಲಾ. ಇದು ಜಗತ್ತಿನಲ್ಲಿಯೇ ಅತ್ಯಧಿಕ ಮಾರಾಟ ಕಂಡ ಮೊದಲ ಕಾರು.
* ಮೊದಲ ಕಾರಿನಲ್ಲಿ ಸ್ಟೇರಿಂಗ್ ಇರಲಿಲ್ಲ. ಕಬ್ಬಿಣದ ಲಿವರ್ ಇತ್ತಂತೆ!
* ಅಪಘಾತ ಸಂಭವಿಸಿದ 40 ಮಿಲಿಸೆಕೆಂಡಿನಲ್ಲಿ ಏರ್ ಬ್ಯಾಗ್ ನಲ್ಲಿ ಗಾಳಿ ತುಂಬಿಕೊಳ್ಳುತ್ತದೆ.
* ಫೆರಾರಿ ಕಂಪನಿಯು ದಿನಕ್ಕೆ ಹೆಚ್ಚೆಂದರೆ 14 ಕಾರುಗಳನ್ನು ಉತ್ಪಾದಿಸುತ್ತದಂತೆ!
* ವಿಶ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆದದ್ದು ಪ್ಯಾರೀಸ್ ಮತ್ತು ಫ್ರಾನ್ಸ್ ನ ಲಿಯಾನ್ ನಲ್ಲಿ ಅಂತೆ. ಸುಮಾರು 110 ಮೈಲು ದೂರದವರೆಗೆ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಕೊಂಡಿದ್ದವು. ಬೆಂಗಳೂರು ಟ್ರಾಫಿಕ್ ಕಿರಿಕಿರಿ ಕುರಿತು ಯಾವುದೇ ಮಾಹಿತಿಯಿಲ್ಲ.
* ಅಮೆರಿಕದ ರಸ್ತೆಗೆ ಪ್ರವೇಶಿಸಿದ ಮೊದಲ ಜಪಾನ್ ಕಾರು "ಹೋಂಡಾ ಆಕಾರ್ಡ್" ಇದರ ಉತ್ಪಾದನೆ ಆರಂಭವಾದದ್ದು 1982ರಲ್ಲಿ.
* ವೈಂಡ್ ಷೀಲ್ಡ್ ವೈಪರನ್ನು ಪರಿಚಯಿಸಿದ್ದು ಮಹಿಳೆ(ಇದರಲ್ಲಿ ಸೋಜಿಗವೇನು ಬಂತು ಅಂತ ಕೇಳಬೇಡಿ).
* ಕಾರುಗಳನ್ನು ಮಾರಾಟ ಆರಂಭಿಸಿದ ಮೊದಲ ಕಂಪನಿ ಬೆಂಝ್. 1987ರಲ್ಲಿ.


Click it and Unblock the Notifications








