ನೂತನ ಮಾರುತಿ 800ಗೆ ಸ್ವಾಗತ, ದರ 2 ಲಕ್ಷ ರು.

ಹಳೆಯ ಮಾರುತಿ 800ನಂತಹ ಕಾರೊಂದನ್ನು ಕಂಪನಿಯು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯೊಂದು ಹೇಳಿದೆ. ಆ ವರದಿ ಹೇಳೋ ಪ್ರಕಾರ ನೂತನ ಕಾರಿಗೂ ಮಾರುತಿ 800 ಎಂಬ ಹೆಸರೇ ಇರಲಿದೆ. ಇದರ ದರ ಆಲ್ಟೋಗಿಂತ ಸುಮಾರು 40 ಸಾವಿರ ರು. ಕಡಿಮೆ ಇರಲಿದೆ ಎಂದು ವರದಿ ಹೇಳಿದೆ.
ಹಳೆಯ 800 ಕಾರಿಗೆ ಹೋಲಿಸಿದರೆ ನೂತನ ಕಾರು ಕೊಂಚ ದೊಡ್ಡದಿರಲಿದೆ. ಕಂಪನಿಯು ಆಲ್ಟೋ ಫ್ಲಾಟ್ ಫಾರ್ಮ್ ನಲ್ಲಿ ಈ ಕಾರನ್ನು ನಿರ್ಮಿಸಲಿದೆ. ಒಂದು ಲಕ್ಷದ ರು.ನ ನ್ಯಾನೊ ದರ ಅಷ್ಟಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಐಷಾರಾಮಿ ನ್ಯಾನೊ ಕಾರಿಗೆ ಈಗ ಎರಡು ಲಕ್ಷ ರುಪಾಯಿಯಿದೆ. ನ್ಯಾನೊ ಕಾರಿಗೆ ಹೋಲಿಸಿದರೆ ನೂತನ ಮಾರುತಿ ದರ ಕೂಡ 2 ಲಕ್ಷ ರು. ಆಸುಪಾಸಿನಲ್ಲಿದೆ ಎಂದು ವರದಿ ಹೇಳಿದೆ.


Click it and Unblock the Notifications








