ಕಾರು ಸ್ಪಾ: ಕಾರು ತೊಳೆಯಲು 8 ಲಕ್ಷ ರು. ಕೊಡಿ

ದುಬೈನ ಮೊಂಝಾ ಅಲ್ಟಿಮೇಟ್ ಡಿಟೈಲಿಂಗ್ ಆಂಡ್ ಪ್ರೊಟೆಕ್ಷನ್ ಕಂಪನಿಯು ನ್ಯಾನೊ ತಂತ್ರಜ್ಞಾನದ ಹೊಸದೊಂದು ಕಾರು ಸ್ಪಾ ಆರಂಭಿಸಿದೆ. ಇಲ್ಲಿ ಕಾರನ್ನು ಮನುಷ್ಯರ ನೆರವಿಲ್ಲದೇ ವಾಷ್ ಮಾಡಲಾಗುತ್ತಂತೆ. ಐಷಾರಾಮಿ ಕಾರುಗಳಿಗೆ ಮನುಷ್ಯರ ಕೈಬೆರಳನ್ನು ಸೊಂಕಿಸದೇ, ದುಬಾರಿ ಕಾರಿಗೆ ಕೊಳಕು ನೀರು ಬಳಸದೇ ಇಲ್ಲಿ ವಾಷ್ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಇಲ್ಲಿ ಬಳಸುವ ನೀರಿನ ಗುಣಮಟ್ಟ, ನೀರಿನ ಶಾಖ ಮತ್ತು ಎಷ್ಟು ಒತ್ತಡದಲ್ಲಿ ನೀರು ಹಾಯಿಸಿ ಕಾರನ್ನು ತೊಳೆಯಬೇಕು.. ಹೀಗೆ ಎಲ್ಲಾ ವಿಷಯಗಳಿಗೂ ಗಮನ ನೀಡಲಾಗುತ್ತದಂತೆ. ಕಸ್ಟಂ ಬುಲ್ಟ್ ಕಾರುಗಳಿಗೆ ಇಂತಹ ಸ್ಪಾಸ್ಪರ್ಷದ ಅವಶ್ಯಕತೆಯಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.
"ಈಗ ನನ್ನ ಶಾಪಿಗೆ 10 ಕಾರುಗಳು ವಾಷಿಂಗ್ ಮಾಡಿಸಿಕೊಳ್ಳಲು ಬಂದಿದೆ. ಕೋಟಿ ಕೋಟಿ ರು. ನೀಡಿ ಖರೀದಿಸಿದ ಕಾರುಗಳನ್ನು ಪೆಟ್ರೊಲ್ ಸ್ಟೇಷನ್ ಗಳಲ್ಲಿ, ಟ್ಯಾಪ್ ನೀರಿನಲ್ಲಿ ತೊಳೆಯುವುದು ಸೂಕ್ತವಲ್ಲ ಎಂದು ನಾನು ದೃಢವಾಗಿ ಹೇಳುತ್ತೇನೆ. ಸಾಮಾನ್ಯ ನೀರಿನಲ್ಲಿ ಲವಣ ಮತ್ತು ಆಸೀಡ್ ಗಳಿರುತ್ತವೆ. ಇದರು ಕಾರಿಗೆ ಹಾನಿ ಮಾಡುತ್ತದೆ" ಎಂದು ಕಂಪನಿಯ ಮುಖ್ಯಸ್ಥ ಫ್ರೆಡೆರಿಕ್ ಫೈದಿ ಹೇಳುತ್ತಾರೆ.
ಈ ಕಂಪನಿಯು ರೋಲ್ಸ್ ರಾಯ್ಸಿ, ಜಾಗ್ವಾರ್, ಮಸೆರಟಿ, ಲಂಬೊರ್ಗಿನಿ ಮತ್ತು ಫೆರಾರಿ ಕಾರುಗಳನ್ನು ಮಾತ್ರ ವಾಷ್ ಮಾಡುತ್ತದಂತೆ. ಆದರೂ.... 8 ಲಕ್ಷ ರುಪಾಯಿ ಕೊಟ್ಟು ಕಾರನ್ನು ವಾಷ್ ಮಾಡಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಹಾಗೆಯೇ ಮನಸ್ಸಿನಲ್ಲಿ ಉಳಿಯುತ್ತದೆ. ಅಲ್ಲವೇ?


Click it and Unblock the Notifications








