ಅಬಕಾರಿ ಸುಂಕ: ಕಾರು, ತಂಬಾಕು ದುಬಾರಿಯಾಗಲಿದೆಯೇ?

ಈ ಕುರಿತು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಆದರೆ ಅಬಕಾರಿ ಸುಂಕ ಹೆಚ್ಚಿಸುವುದು ಸುಲಭವಲ್ಲವೆಂದು ಮೂಲಗಳು ಅಭಿಪ್ರಾಯಪಟ್ಟಿವೆ. ಬಂಡವಾಳ ಸರಕುಗಳು ಮತ್ತು ಉತ್ಪಾದನಾ ಪ್ರಗತಿದರ ಇಳಿಮುಖವಾಗಿರುವಾಗ ಯಾವುದೇ ರೀತಿಯ ಸುಂಕ ಹೆಚ್ಚಳ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತವೆ.
ಜೊತೆಗೆ ಹಣಕಾಸು ಹೂಡಿಕೆ ಕೂಡ ಇಳಿಮುಖವಾಗುವ ಸಾಧ್ಯತೆಯಿದೆ. ಈ ಕಾರಣಗಳಿಂದ ಇವೆರಡು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸುವುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.
ಆದಗ್ಯೂ, ಕಾರಿನ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವುದು ಸುಲಭವಲ್ಲವೆಂದು ಮೂಲಗಳು ಹೇಳಿವೆ. ಈಗ ದೇಶದ ವಾಹನೋದ್ಯಮ ಕಷ್ಟದ ದಿನಗಳಲ್ಲಿವೆ. ಕಂಪನಿಗಳು ಮಾರಾಟ ಇಳಿಕೆ ಮತ್ತು ಹೆಚ್ಚಳದಿಂದ ಪರಿತಪಿಸುತ್ತಿವೆ. ಹೀಗಾಗಿ ಅಬಕಾರಿ ಸುಂಕ ಸಾಧುವಲ್ಲವೆಂಬ ವಾದವೂ ಇದೆ.
ಡೀಸಲ್ ಮತ್ತು ದುಬಾರಿ ಕಾರುಗಳ ಮೇಲಿನ ಅಬಕಾರಿ ಸುಂಕ ಹೆಚ್ಚು ಮಾಡಿ ಎಂಬ ಅಭಿಪ್ರಾಯವೂ ಬಂದಿದೆ. ಸಣ್ಣ ಪೆಟ್ರೊಲ್ ಕಾರುಗಳಿಗೆ ಸುಂಕ ಹೆಚ್ಚಿಸುವುದು ಬೇಡವೆಂಬ ಅಭಿಪ್ರಾಯವೂ ಇದೆ. ಒಟ್ಟಾರೆ ದೇಶದ ವಾಹನ ಲೋಕಕ್ಕೆ ಬರೆಯ ಮೇಲೊಂದು ಬರೆ ಬೀಳುವ ಸಾಧ್ಯತೆಯಿದೆ.


Click it and Unblock the Notifications








