ಗಂಟೆಗೆ 502 ಕಿ.ಮೀ ವೇಗ: ಹಯಾಬುಸ ವೇಗದ ದಾಖಲೆ

Man Sets Top Speed Record Of 502kmph On Hayabusa
ದಾಖಲೆಯಿರುವುದೇ ಮತ್ತೊಬ್ಬರಿಂದ ಮುರಿಸಿಕೊಳ್ಳಲು. ಆದರೆ ಇಲ್ಲೊಂದು ದಾಖಲೆಯಿದೆ. ಇದು ಕೊಂಚ ದೀರ್ಘಕಾಲ ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಬಿಲ್ ವಾರ್ನರ್ ಎಂಬ ಫ್ಲೋರಿಡಾ ನಿವಾಸಿ ಟರ್ಬೊಚಾರ್ಜ್ಡ್ ಸುಜುಕಿ ಹಯಾಬುಸ ಬೈಕಿನಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾನೆ.

ಆತ ಮಾಡಿದ ದಾಖಲೆ ಏನು ಗೊತ್ತೆ? ಹಯಾಬುಸ ಬೈಕಿನಲ್ಲಿ ಪ್ರತಿಗಂಟೆಗೆ 502 ಕಿ.ಮೀ ವೇಗದಲ್ಲಿ ಸಾಗಿದ್ದು. ಅಮೆರಿಕದ ಮೈನೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ದಾಖಲೆಯ ವೇಗದಲ್ಲಿ ಸಾಗಿದ್ದ. ಪಕ್ಕದಲ್ಲಿದ್ದ ವಿಮಾನಗಳು ಈತನ ವೇಗ ಕಂಡು ನಾಚಿರಬೇಕು! ಇದಕ್ಕೂ ಮುನ್ನ ವ್ಯಕ್ತಿಯೊಬ್ಬ ಹಯಾಬುಸದಲ್ಲಿ ಪ್ರತಿಗಂಟೆಗೆ 278.6 ಕಿ.ಮೀ. ವೇಗದಲ್ಲಿ ಹೋಗಿ ದಾಖಲೆ ಬರೆದಿದ್ದ. ಆದರೆ ಬಿಲ್ ವಾರ್ನರ್ ವೇಗಕ್ಕೆ ಹಳೆಯ ದಾಖಲೆ ಹಾರಿ ಹೋಗಿದೆ.

ಹಯಾಬುಸ ಅಂದ್ರೆ ಬುಗಾಟಿಯಂತಹ ಸ್ಪೋರ್ಟ್ಸ್ ಬೈಕಲ್ಲ. ನಮ್ಮ ಬೆಂಗಳೂರು ರಸ್ತೆಯಲ್ಲಿ ಹೆಚ್ಚಿನವರು ಪ್ರತಿಗಂಟೆಗೆ 60 ಕಿ.ಮೀ. ವೇಗದಲ್ಲಿ ಹೋದರೆ ಹೆಚ್ಚು. ಹೆದ್ದಾರಿಯಲ್ಲಿ ಪ್ರತಿಗಂಟೆಗೆ 80-90 ಕಿ.ಮೀ. ವೇಗದಲ್ಲಿ ಸಾಗಬಹುದು. ಅತಿವೇಗದ ಕ್ರೇಝ್ ಇರುವರು 100 ಕಿ.ಮೀ ದಾಟಬಹುದು. ಆದರೆ ಇವನ ವೇಗದ ಆವೇಗ ನಿಜಕ್ಕೂ ದಾಖಲೆಯದ್ದು.

ಬಿಲ್ ವಾರ್ನರ್ ಅನುಭವದ ಮಾತನ್ನೇ ಕೇಳಿ. "ಪ್ರಾಣದ ಹಂಗುತೊರೆದು ಗರಿಷ್ಠ ವೇಗದಲ್ಲಿ ಸಾಗುವುದು ಕಷ್ಟವೇನಲ್ಲ. ವಿಮಾನದ ರನ್ ವೇನಲ್ಲಿ ಗರಿಷ್ಠ ವೇಗದಿಂದ ವೇಗ ಕಡಿಮೆ ಮಾಡಿ ನಿಲ್ಲಿಸುವುದು ಕಷ್ಟ. ಹಯಾಬುಸವನ್ನು ನಿಲ್ಲಿಸುವ ವೇಳೆಗೆ ನಾನು ರನ್ ವೇ ದಾಟಿದ್ದೆ" ಎನ್ನುತ್ತಾರೆ.

More from DriveSpark

Article Published On: Saturday, July 30, 2011, 11:43 [IST]
English summary
Bill Warner, a resident of Florida, USA has set a new speed record while riding a turbocharged Suzuki Hayabusa. He has set a record top speed of 311.95mph (502km/h) at the Loring Air Force Base in Maine, USA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+