ವಂಚನೆ ಆರೋಪ, ಮರ್ಸಿಡಿಸ್ ಗೆ ಕ್ಲೀನ್ ಚಿಟ್

ಭಾರತದ ಪಾಲುದಾರ ಕಂಪನಿ ಟಾಟಾ ಎಂಜಿನಿಯರಿಂಗ್ ಆಂಡ್ ಲೋಕೊಮೋಟಿವ್ಸ್ ಕಂ.(ಟೆಲ್ಕೊ) ಮತ್ತು ಮರ್ಸಿಡಿಸ್ ಇಂಡಿಯಾ ದೇಶದಲ್ಲಿ ಹೈಎಂಡ್ ಕಾರ್ ಗಳನ್ನು ಉತ್ಪಾದಿಸುವ ಕಂಪನಿಯಾಗಿದೆ. ಈ ಜಂಟಿ ಕಂಪನಿಯ ಮೇಲೆ 12 ವರ್ಷಗಳ ಹಿಂದೆ ಮುಂಬೈ ಮೂಲದ ಮೇರಿನ್ ಕಂಟೈನರ್ ಸರ್ವಿಸ್ ವಂಚನೆ ಪ್ರಕರಣ ದಾಖಲಿಸಿತ್ತು. ಉತ್ಪಾದನೆ ನಿಲ್ಲಿಸಿರುವ ವಾಹನಗಳನ್ನು ಮಾರಾಟ ಮಾಡಿ ವಂಚಿಸಿರುವುದಾಗಿ ಮರ್ಸಿಡಿಸ್ ಮೇಲೆ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
"ಗ್ರಾಹಕರಿಗೆ ಒಂದು ವರ್ಷದ ಹಿಂದೆ ಮಾರಾಟ ಮಾಡಿರುವ ಹಳೆಯ ಮಾದರಿಯೊಂದರ ಉತ್ಪಾದನೆಯನ್ನು ಕಂಪನಿ ನಿಲ್ಲಿಸಿದರೆ ಮತ್ತು ಮುಂದಿನ ವರ್ಷ ಅದೇ ಮಾದರಿಯೊಂದನ್ನು ಪರಿಷ್ಕರಿಸಿ ಹೊಸ ಮಾಡೆಲ್ ಹೊರತಂದರೆ ಅದರಲ್ಲಿ ಯಾವುದೇ ರೀತಿಯ ವಂಚನೆ ಇಲ್ಲವೆಂದು ಪ್ರಕರಣ ಆಲಿಸಿದ ಗ್ರಾಹಕ ನ್ಯಾಯಾಲಯದ ನ್ಯಾಯಮೂರ್ತಿ ಆರ್ ಸಿ ಜೈನ್ ಮತ್ತು ಸದಸ್ಯ ಎಸ್ ಕೆ ನಾಯ್ಕ್ ವಿಭಾಗೀಯ ಪೀಠ ತೀರ್ಪು ನೀಡಿದೆ.


Click it and Unblock the Notifications








