ಟಾಟಾ ಮೋಟಾರ್ಸ್ ನಿಂದ ಹೊಸ ಮಾಂಝಾ

Tata Manza
ಟಾಟಾ ಮೋಟಾರ್ಸ್ ನ ಸೆಡಾನ್ ಆವೃತ್ತಿ "ನ್ಯೂ ಮಾಂಝಾ" ನಾಡಿದ್ದು ಅಂದರೆ ಭಾನುವಾರ ರಸ್ತೆಗಿಳಿಯಲಿದೆ. ನೂತನ ಮಾಂಝಾ ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕಲಿದೆ.

ನ್ಯೂ ಮಾಂಝಾ ದರ ಆಕರ್ಷಕವಾಗಿದ್ದು, ಸಫೈರ್ ಪೆಟ್ರೋಲ್ ಎಂಜಿನ್ ಮಾದರಿಗೆ ಸುಮಾರು 5.14 ಲಕ್ಷ ರೂ. ಮತ್ತು ಕ್ಯೂಡ್ರಜೆಟ್ ಡೀಸಲ್ ಮಾದರಿಗೆ ಸುಮಾರು 5.91 ಲಕ್ಷ ರೂಪಾಯಿ ಆಗಿದೆ. ಮುಂದಿನ ಸೋಮವಾರದಿಂದ ದೇಶದಲ್ಲಿರುವ ಕಂಪನಿಯ ಎಲ್ಲ ಡೀಲರ್ಸ್ ಬಳಿ ನೂತನ ಕಾರ್ ದೊರಕಲಿದೆ ಎಂದು ಕಂಪನಿ ಹೇಳಿದೆ.

ದೇಶದ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ 2009-10ರಲ್ಲಿ ಸುಮಾರು 92,519 ಕೋಟಿ ರೂ. ಆದಾಯ ಗಳಿಸಿದೆ. ದೇಶದ ರಸ್ತೆಯಲ್ಲಿ ಟಾಟಾ ಮೋಟಾರ್ಸ್ ನ ಸುಮಾರು 59 ಲಕ್ಷ ವಾಹನಗಳಿವೆ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮಾರುಕಟ್ಟೆಯಲ್ಲಿ ನಾಯಕನಾಗಿದ್ದು, ಕಡಿಮೆ ದರದ ನ್ಯಾನೊ ಸೇರಿದಂತೆ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನ ಪಡೆದಿದೆ.

ನೂತನ ಮಾಂಝಾ ಬಗ್ಗೆ ಇನ್ನಷ್ಟು
* ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಮಾದರಿಯಲ್ಲಿ ದೊರಕುತ್ತದೆ
* ಪೆಟ್ರೊಲ್ ಎಂಜಿನ್ ಕಾರ್ ಹೆಸರು ಸಫೈರ್, ಡೀಸಲ್ ಎಂಜಿನ್ ಹೆಸರು ಕ್ಯೂಡ್ರಜೆಟ್
* 5+1 ಗೇರ್ ಬಾಕ್ಸ್
* 1,368 ಸಿಸಿ ಪೆಟ್ರೊಲ್ ಎಂಜಿನ್ (ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್)
* 1,248 ಸಿಸಿ ಡೀಸಲ್ ಎಂಜಿನ್ (ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್)
* ಪೆಟ್ರೋಲ್ ಆವೃತ್ತಿ ಮೈಲೇಜ್: ನಗರದಲ್ಲಿ ಪ್ರತಿಲೀಟರ್ ಗೆ 12.2 ಕಿ.ಮೀ. ಹೆದ್ದಾರಿಗಳಲ್ಲಿ 15.1 ಕಿ.ಮೀ.
* ಡೀಸಲ್ ಆವೃತ್ತಿ ಮೈಲೇಜ್: ನಗರದಲ್ಲಿ ಪ್ರತಿಲೀಟರ್ ಗೆ 13.8 ಕಿ.ಮೀ. ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 18.2 ಕಿ.ಮೀ.

More from DriveSpark

Article Published On: Tuesday, February 8, 2011, 17:17 [IST]
English summary
English Summary: The latest version of Tata Motors' sedan Manza, equipped with a range of new features, hit the roads Sunday. Competitively priced, Tata Manza would cost from Rs.5.14 lakh for the Safire petrol range and from Rs.5.91 lakh for the Quadrajet diesel range (both prices ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+