ಸ್ವಿಫ್ಟ್ ವೇಟಿಂಗ್ ಅವಧಿ ಎಷ್ಟು? ಬೇರೆ ಯಾವ ಕಾರಿದೆ?

ಸದ್ಯ ರಸ್ತೆಯಲ್ಲಿರುವ ಸ್ವಿಫ್ಟ್ ಕಾರಿನ ಮೇಲಿನ ನಂಬಿಕೆಯಿಂದ ಗ್ರಾಹಕರು ನೂತನ ಸ್ವಿಫ್ಟ್ ಮೇಲೆ ಆಸಕ್ತರಾಗಿದ್ದಾರೆ. ಆದರೆ ಹೆಚ್ಚಿನವರಿಗೆ ತಿಳಿದಿಲ್ಲ. ನೂತನ ಸ್ವಿಫ್ಟ್ ವೈಟಿಂಗ್ ಪಿರೇಡ್ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಕೆಲವು ವರದಿ ಪ್ರಕಾರ ನೂತನ ಸ್ವಿಫ್ಟ್ ವೈಟಿಂಗ್ ಪಿರೇಡ್ ಸುಮಾರು 3ರಿಂದ 6 ತಿಂಗಳು ಇರಬಹುದಂತೆ.
ಹಬ್ಬದ ಸೀಸನ್ ಗೆ ಕಾರು ಖರೀದಿಸಬೇಕೆಂದು ಬಯಸುವರು ಮಾತ್ರ ಬೇರೆ ಕಾರನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಮುಂದಿನ ವರ್ಷದವರೆಗೆ ಕಾಯುವುದು ಸೂಕ್ತ. ಬೇರೆ ಯಾವ ಕಾರು ಸೂಕ್ತ ಅಂತ ಕೇಳುತ್ತಿದ್ದೀರಾ? ಇಲ್ಲೊಂದು ಸಣ್ಣ ಪಟ್ಟಿಯಿದೆ.
* ಸ್ಕೋಡಾ ಫಾಬಿಯಾ ಆಯ್ಕೆ ಮಾಡಿಕೊಳ್ಳಬಹುದು. ಯಾಕೆಂದರೆ ಇದು ನೋಡಲು ಸ್ವಿಫ್ಟ್ ನಂತೆ ಇದೆ. ಆದರೆ ಫಾಬಿಯಾ ಡೀಸಲ್ ಕಾರು ನೂತನ ಸ್ವಿಫ್ಟ್ ಗಿಂತ ಸುಮಾರು 50 ಸಾವಿರ ರು. ದುಬಾರಿ.
* ಅಥವಾ ನೀವು ಡೀಸಲ್ ಬೀಟ್ ಕಾರು ಖರೀದಿಸಬಹುದು. ಷವರ್ಲೆ ಬೀಟ್ ಡೀಸಲ್ ದರ 4.2 ಲಕ್ಷ ರು.ನಿಂದ ಆರಂಭವಾಗುತ್ತದೆ. ಈ ಕಾರಿಗೆ ಮೂರು ವರ್ಷ ಉಚಿತ ಸರ್ವಿಸ್ ಇದೆಯಂತೆ!
* ಸ್ವಿಫ್ಟ್ ಪ್ರತಿಸ್ಪರ್ಧಿ ಫಿಯೆಟ್ ಪುಂಟೊ ಕಾರನ್ನು ಕೂಡ ಖರೀದಿಸಲು ಆಲೋಚಿಸಬಹುದು. ಆದರೆ ಇದು ಕೊಂಚ ದುಬಾರಿ ಎನಿಸಿದರೂ ಅಡ್ಡಿಯಿಲ್ಲ. ಅಂದರೆ ಫಿಯೆಟೊ ಪುಂಟೊ ಡೀಸಲ್ ಕಾರಿನ ದರ 4.82 ಲಕ್ಷ ರು. ಮತ್ತು ಡೀಸಲ್ ಕಾರಿನ ದರ 6.11 ಲಕ್ಷ ರು.ನಿಂದ ಆರಂಭವಾಗುತ್ತದೆ.
* ಸ್ವಲ್ಪ ಹೆಚ್ಚು ದುಡ್ಡು ನೀಡಲು ನೀವು ತಯಾರಿದ್ದಾರೆ ಫೋಕ್ಸ್ ವ್ಯಾಗನ್ ಪೊಲೊ ಕಾರನ್ನು ಖರೀದಿಸಬಹುದು. ಇದರ ದರ 5.48 ಲಕ್ಷ ರು.ನಿಂದ 8.17 ಲಕ್ಷ ರು.ವರೆಗಿದೆ. ಇದು 1.6 ಲೀಟರ್ ಎಂಜಿನ್ ಹೊಂದಿದೆ.


Click it and Unblock the Notifications