ಹಂಗೇರಿ ಬೇಡಾರಿ ಎಂದ ಮಾರುತಿ ಸುಜುಕಿ

ಸದ್ಯ ಕಂಪನಿಯ ನೂತನ ಸ್ವಿಫ್ಟ್ ಬಿಡುಗಡೆಗೆ ಮುನ್ನವೇ ಹೊಸ ಹವಾ ಸೃಷ್ಟಿಸಿದೆ. ಕಂಪನಿಯ ನಿರೀಕ್ಷೆಯನ್ನು ಮೀರಿ ಫ್ರೀಲಾಂಚಿಂಗ್ ಬುಕ್ಕಿಂಗ್ ಆಗಿದೆ. ಇದರಿಂದ ವೇಟಿಂಗ್ ಅವಧಿ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ತಗ್ಗಿಸಲು ಕಂಪನಿಯು ಹಂಗೇರಿಗೆ ಡೀಸಲ್ ಎಂಜಿನ್ ಕಡಿಮೆ ರಫ್ತು ಮಾಡಲು ನಿರ್ಧರಿಸಿದೆ.
"ಕಂಪನಿಯು ಹಂಗೇರಿಗೆ ಡೀಸಲ್ ಎಂಜಿನ್ ರಫ್ತನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಪ್ರತಿವರ್ಷ 35 ಸಾವಿರದಿಂದ 45 ಸಾವಿರದಷ್ಟು ಡೀಸಲ್ ಎಂಜಿನ್ ರಫ್ತು ಮಾಡಲಾಗುತ್ತಿತ್ತು. ಆದರೆ ಮುಂದಿನ ಆರು ತಿಂಗಳಲ್ಲಿ ಇದನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕರಾದ ಮಯಾಂಕ್ ಪಾರೇಕ್ ಹೇಳಿದ್ದಾರೆ.


Click it and Unblock the Notifications








