ವೆಸ್ಪಾ ರಸ್ತೆಗಿಳಿಯೋ ಮುನ್ನ ಸ್ಕೂಟರ್ ಗೆ ಟಾಪ್ ಗೇರ್

ಕಂಪನಿಯು ಪ್ರಸಕ್ತ ಡಿಸೆಂಬರಿನಿಂದಲೇ ವೆಸ್ಪಾ ಉತ್ಪಾದನೆ ಆರಂಭಿಸಲಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಮಾರಾಟಕ್ಕೆ ವೆಸ್ಪಾ ಸಿದ್ಧವಾಗಲಿದೆ.
"2012ರ ಫೆಬ್ರವರಿಯಿಂದ ಮಾರ್ಚ್ ನಡುವೆ ನೂತನ ವೆಸ್ಪಾವನ್ನು ರಸ್ತೆಗಿಳಿಸುವ ನಿರೀಕ್ಷೆಯಲ್ಲಿದ್ದೇವೆ" ಎಂದು ಪಿಯಾಜಿಯೊ ವೆಹಿಕಲ್ ಇಂಡಿಯಾದ ನಿರ್ದೇಶಕ ರವಿ ಛೋಪ್ರಾ ಹೇಳಿದ್ದಾರೆ.
ನೂತನ ವೆಸ್ಪಾ ಉತ್ಪಾದನೆಗಾಗಿ ಕಂಪನಿಯು 3 ಕೋಟಿ ಯುರೋ ಹೂಡಿಕೆ ಮಾಡಿದೆ. ಇಲ್ಲಿ ವರ್ಷಕ್ಕೆ ಒಂದುವರೆ ಲಕ್ಷ ಸ್ಕೂಟರ್ ಉತ್ಪಾದಿಸುವ ನಿರೀಕ್ಷೆಯನ್ನು ರವಿ ಛೋಪ್ರಾ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಕಂಪನಿಯು ಪ್ರಯಾಣಿಕ ಆವೃತ್ತಿ ಆಪೆ ಮಿನಿ ಟ್ರಕ್ ಕೂಡ ಹೊರತರಲಿದೆಯಂತೆ!


Click it and Unblock the Notifications








