ಕಾರು ರೇಸಿಂಗ್ ತಂಡ ಖರೀದಿಯತ್ತ ಸಚಿನ್, ಯುವರಾಜ

ಇದೀಗ ದೇಶದ ಹೆಮ್ಮೆಯ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ರೇಸಿಂಗ್ ನತ್ತ ಆಸಕ್ತಿ ತೋರುತ್ತಿದ್ದಾರೆ. ಇವರಿಬ್ಬರು ಜೊತೆಯಾಗಿ ರೇಸಿಂಗ್ ಕಾರು ತಂಡವೊಂದನ್ನು ಖರೀದಿಸಲಿದ್ದಾರಂತೆ.
ಡಿಸೆಂಬರ್ 18ರಿಂದ ಆರಂಭವಾಗುವ ಐ1 ಸೂಪರ್ ಸೀರಿಸ್ ಗಾಗಿ ಕಾರು ರೇಸಿಂಗ್ ತಂಡ ಖರೀದಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ತಂಡದಲ್ಲಿ ಎರಡು ಕಾರುಗಳಂತೆ ಒಂಬತ್ತು ತಂಡ ಭಾಗವಹಿಸುವ ಈ ರೇಸಿಂಗ್ 7 ಏಷ್ಯಾ ನಗರಗಳಲ್ಲಿ ನಡೆಯಲಿದೆ.
ಪ್ರತಿ ವಾರಾಂತ್ಯಗಳಲ್ಲಿ ಎರಡು ರೇಸಿನಂತೆ ಹದಿನಾಲ್ಕು ರೇಸ್ ನಡೆಯಲಿದೆ. 9 ಫ್ರಾಂಚೈಸಿಗಳಿಗೆ ತಂಡಗಳನ್ನು ಆರಂಭಿಕ 50 ಲಕ್ಷ ಡಾಲರಿನಂತೆ ಮಾರಾಟ ಮಾಡಲಾಗುವುದಂತೆ. ಇದಕ್ಕಾಗಿ ಯಾವುದೇ ಹರಾಜು ಪ್ರಕ್ರಿಯೆ ನಡೆಯುವುದಿಲ್ಲ. ಆಮಂತ್ರಿತರು ಮಾತ್ರ ತಂಡ ಖರೀದಿಸಬಹುದು.
ಸಚಿನ್ ತೆಂಡೂಲ್ಕರ್ ಮೂಲತಃ ಫಾರ್ಮುಲಾ ಒನ್ ಫ್ಯಾನ್. ಅವರಿಗೆ ಕಾರು ರೇಸಿಂಗ್ ಅಂದ್ರೆ ಇಷ್ಟ. ಫೆರಾರಿ ಕಂಪನಿಯೇ ಕಾರೊಂದನ್ನು ಸಚಿನ್ ಗೆ ಗಿಫ್ಟ್ ನೀಡಿತ್ತು. ಅವರಲ್ಲಿ ಫೆರಾರಿ 360 ಕಾರಿತ್ತು. ಅದನ್ನು ಇತ್ತೀಚೆಗೆ ಸೂರತ್ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದರು. ನಂತರ ನೂತನ ನಿಸ್ಸಾನ್ ಜಿಟಿ ಕಾರನ್ನು ಖರೀದಿಸಿದ್ದರು.


Click it and Unblock the Notifications








