ಭಾರತದ ರಸ್ತೆಗಿಳಿಯಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು

"ಈ ಕಾರುಗಳನ್ನು ಮೊದಲು ಜರ್ಮನಿಗೆ ಪರಿಚಯಿಸುತ್ತೇವೆ. ಭಾರತ ಸೇರಿದಂತೆ ಉಳಿದ ಮಾರುಕಟ್ಟೆಗಳಿಗೆ ನಂತರ ಪರಿಚಯಿಸಲಿದ್ದೇವೆ. ಆದರೆ ಇದಕ್ಕೆ ಒಂದೆರಡು ವರ್ಷ ಕಾಯುವುದು ಮಾತ್ರ ಅನಿವಾರ್ಯ" ಎಂದು ಕಂಪನಿಯ ಆಡಳಿತ ಮಂಡಳಿಯ ಚೇರ್ಮನ್ ನೊರ್ಬಟ್ ಹೇಳಿದ್ದಾರೆ.
ಸದ್ಯ ಭಾರತದಂತಹ ರಾಷ್ಟ್ರಗಳಲ್ಲಿ ಪೆಟ್ರೊಲ್ ದುಬಾರಿಯಾಗಿದೆ. ಡೀಸೆಲ್ ಕಾರುಗಳಿಗೆ ಹಲವು ತೆರಿಗೆಗಳು ಭಾರವಾಗಿವೆ. ಭವಿಷ್ಯದಲ್ಲಿ ಹೆಚ್ಚಿನ ಕಾರುಗಳು ಹೈಬ್ರಿಡ್ ಗೆ ಮತಾಂತರವಾಗುವ ನಿರೀಕ್ಷೆಯಿದೆ. ಹೀಗಾಗಿ ಐಷಾರಾಮಿ ಕಾರು ಕಂಪನಿಗಳು ಸೇರಿದಂತೆ ಹೆಚ್ಚಿನ ಕಂಪನಿಗಳು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ನಿರ್ಧರಿಸಿವೆ.
ಬಿಎಂಡಬ್ಲ್ಯು ನೂತನ ಎಲೆಕ್ಟ್ರಿಕ್ ಕಾರುಗಳು ಐರೋಪ್ಯ ಒಕ್ಕೂಟದ ವಾಯುಮಾಲಿನ್ಯ ನಿಯಂತ್ರಣ ನಿಯಮದಂತೆ ರೂಪಿತವಾಗಿದೆ. ಪರಿಸರ ಉಳಿಸಲು ಪ್ಲಗ್ ಇನ್ ಹೈಬ್ರಿಡ್ ಮತ್ತು ಬ್ಯಾಟರಿ ಎಲೆಕ್ಟ್ರಿಕ್ ಕಾರುಗಳು ನೆರವಾಗಲಿದೆ ಎಂದು ಒಕ್ಕೂಟ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು. ಇದರಲ್ಲಿ ಬಿಎಂಡಬ್ಲ್ಯು ಐ3 ಝೀರೋ ಪರಿಸರ ಮಾಲಿನ್ಯ ವಾಹನವಾಗಲಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications








