ನೂತನ ಮಾರುತಿ 800 ಬರೋದು ಗ್ಯಾರಂಟಿ

ಹೌದು. ಒಂದನೊಂದು ಕಾಲದಲ್ಲಿ ದೇಶದ ರಸ್ತೆಯಲ್ಲಿ ಪಾರಮ್ಯ ಮೆರೆದಿದ್ದ, ಇನ್ನೂ ರಸ್ತೆಯಲ್ಲಿ ಕಾಣಸಿಗುವ ಮಾರುತಿ 800 ಎಂಬ ಸಣ್ಣ ಕಾರು ಮತ್ತೆ ರಸ್ತೆಗಿಳಿಯಲಿದೆ. ಅದು ಕೂಡ ಹೊಸ ಅವತಾರದಲ್ಲಿ. ಇದಕ್ಕಾಗಿ ಮಾರುತಿ ಸುಜುಕಿ ನೂತನ 800ಸಿಸಿಯ ಎಂಜಿನೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ ಮಾರುತಿ 800 ಬರೋದು ಖಾತ್ರಿಯಾಗಿದೆ.

"ನಾವು ನೂತನ 800ಸಿಸಿಯ ಪೆಟ್ರೊಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ಮಾರುತಿ ಸುಜುಕಿ ಎಂಜಿನಿಯರ್ ಗಳು ಹೇಳಿದ್ದಾರೆ. ಆದರೆ ಕಂಪನಿಯ ವ್ಯವಸ್ಥಾಪಕ ಕಾರ್ಯನಿರ್ವಹಣಾಧಿಕಾರಿ ಪ್ರಕಾರ ಮಾರುತಿ 800ಗೆ ಪ್ರತಿಯಾಗಿ ಈ ಕಾರನ್ನು ಹೊರತರಲಾಗುತ್ತಿಲ್ಲ. ಅದರೆ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ತುಂಬುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಆದರೆ ನೂತನ ಮಾರುತಿ 800 ಕಾರನ್ನು ಆಲ್ಟೊ ಫ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸುವ ನಿರೀಕ್ಷೆಯನ್ನು ಕಂಪನಿಯ ಮೂಲಗಳು ವ್ಯಕ್ತಪಡಿಸಿವೆ. ಆದರೂ ಕಾರಿನ ಹೊರವಿನ್ಯಾಸ, ಏರೋ ಡೈನಾಮಿಕ್ಸ್, ಹೆಡ್ ಲೈಟ್ಸ್ ವಿನ್ಯಾಸಗಳೆಲ್ಲ ಹಳೆಯ 800 ಕಾರಿಗಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.

ನೂತನ ಮಾರುತಿ ಸುಜುಕಿ 800 ದರ ಆಲ್ಟೊಗಿಂತ ತುಸು ಹೆಚ್ಚಿರುವ ನಿರೀಕ್ಷೆಯಿದೆ. ನೂತನ ಮಾರುತಿ 800 ಕಾರು, ಹ್ಯುಂಡೈನ ನೂತನ ಎಚ್800 ಸಣ್ಣಕಾರಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ನಿಸ್ಸಾನ್ ಕೂಡ ಸಣ್ಣ ಕಾರು ಹೊರತರಲಿದೆ. ಟಾಟಾ ನ್ಯಾನೊಗೂ ನೂತನ ಮಾರುತಿ ಕಾರು ಪೈಪೋಟಿ ನೀಡಲಿದೆ.

Article Published On: Thursday, August 11, 2011, 11:58 [IST]
English summary
The Maruti 800 is back! India's most loved car which was slowly phased out of cities due to emission norms is making a comeback in a brand new avatar. Maruti Suzuki has revealed that it is developing a new 800cc engined small car that will replace the current Maruti 800.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+