ನೂತನ ಮಾರುತಿ ಸುಜುಕಿ ಸ್ವಿಫ್ಟ್ ಚಿತ್ರ ವಿಮರ್ಶೆ

ಚಿತ್ರ ನೋಡಿ ವಧುವನ್ನು ಒಪ್ಪಿಕೊಳ್ಳಬಾರದಂತೆ ಎಂಬ ಮಾತೊಂದಿದೆ. ಆದರೆ ನೂತನ ಸ್ವಿಫ್ಟ್ ಗಾಗಿ ಗ್ರಾಹಕರು ಚಿತ್ರ ನೋಡುವ ಮೊದಲೇ ಬುಕ್ಕಿಂಗ್ ಮಾಡಿದ್ದಾರೆ. ನಾವು ಈ ಹಿಂದೆ ವರದಿ ಮಾಡಿದಂತೆ ಸುಮಾರು 38 ಸಾವಿರ ಗ್ರಾಹಕರು ನೂತನ ಸ್ವಿಫ್ಟ್ ರಸ್ತೆಗಿಳಿಯುವ ಮುನ್ನವೇ ಬುಕ್ಕಿಂಗ್ ಮಾಡಿದ್ದಾರೆ. ನೂತನ ಸ್ವಿಫ್ಟ್ ಆಗಸ್ಟ್ 17ರಂದು ರಸ್ತೆಗಿಳಿಯಲಿದೆ.
ಸದ್ಯ ಚಿತ್ರದಲ್ಲಿರುವುದು ಕೆಂಪುಬಣ್ಣದ ನೂತನ ಸ್ವಿಫ್ಟ್. ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ವಿನ್ಯಾಸ ಬದಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಜೊತೆಗೆ ಸ್ವಿಫ್ಟ್ ಗಾತ್ರದಲ್ಲೂ ಬದಲಾಗಿದೆ. ಲಗೇಜ್ ಸ್ಥಳಾವಕಾಶ ಹೆಚ್ಚಾಗಿರುವುದು ಚಿತ್ರದಲ್ಲಿ ಸ್ಪಷ್ಟವಾಗುತ್ತದೆ.
ಕಂಪನಿಯು ಪ್ರಸಕ್ತ ಬುಕ್ಕಿಂಗ್ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಹಗುರ ಪ್ಲಾಸ್ಟಿಕ್ ಇಂಧನ ಟ್ಯಾಂಕ್ ಅಳವಡಿಸಿರುವುದರಿಂದ ಇಂಧನ ದಕ್ಷತೆಯೂ ಹೆಚ್ಚಾಗಲಿದೆ. 17ರಂದು ರಸ್ತೆಗಿಳಿಯುವ ನೂತನ ಸ್ವಿಫ್ಟ್ ನಿರೀಕ್ಷೆಯಲ್ಲಿರೋಣ.


Click it and Unblock the Notifications