ಸ್ವಿಫ್ಟ್ ಇಂದು ಅನಾವರಣ, ಕ್ಷಣಗಣನೆ ಆರಂಭ

Maruti Swift 2011
ಈ ವರ್ಷದ ಬಹುನಿರೀಕ್ಷಿತ ಕಾರೊಂದು ಅನಾವರಣಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂದು ನೂತನ ಸ್ವಿಫ್ಟನ್ನು ಔಪಚಾರಿಕವಾಗಿ ಹೊರತರಲಿದೆ.

ಈಗಾಗಲೇ ರಸ್ತೆಯಲ್ಲಿ ಹಳೆಯ ಸ್ವಿಫ್ಟ್ ಮಾಡಿದ ಮೋಡಿ ಈಗ ಇತಿಹಾಸ. ರಸ್ತೆಯಲ್ಲಿ ಎಲ್ಲಿ ನೋಡಿದರೂ ಹೆಚ್ಚು ಸ್ವಿಫ್ಟ್ ಕಾರುಗಳೇ ಕಾಣಸಿಗುತ್ತಿವೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸ್ವಿಫ್ಟ್ ರೈಡಿಂಗ್ ಅನುಭವ ನೀಡುವ ಉದ್ದೇಶದಿಂದ ಕಂಪನಿಯು ಹಳೆಯ ಸ್ವಿಫ್ಟ್ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿತ್ತು.

ನೂತನ ಸ್ವಿಫ್ಟ್ ಹೇಗಿರಲಿದೆ ಅನ್ನೋದು ತಿಳಿಯುವ ಮೊದಲೇ ಸಾಕಷ್ಟು ಬುಕ್ಕಿಂಗ್ ಆಗಿತ್ತು. ಇತ್ತೀಚೆಗೆ ಕಂಪನಿಯು ನೂತನ ಸ್ವಿಫ್ಟ್ ಕಾರಿನ ಚಿತ್ರವನ್ನು ಹೊರತಂದಿತ್ತು. ಒಂದು ಮೂಲದ ಪ್ರಕಾರ ಈಗಾಗಲೇ ನೂತನ ಸ್ವಿಫ್ಟ್ ಬುಕ್ಕಿಂಗ್ 45 ಸಾವಿರ ಯೂನಿಟ್ ಗಡಿ ದಾಟಿದೆಯಂತೆ.

ನೂತನ ಸ್ವಿಫ್ಟ್ ದರ ಹಳೆಯ ಸ್ವಿಫ್ಟ್ ಗಿಂತ ಕೊಂಚ ಹೆಚ್ಚಿರಲಿದೆ. ಇದರೊಂದಿಗೆ ಇಂಟಿರಿಯರ್ ಸ್ಥಳಾವಕಾಶ ಮತ್ತು ಕಾರ್ಯಕ್ಷಮತೆ ಹೆಚ್ಚಾಗಲಿದೆ. ಫೋರ್ಡ್ ಫಿಗೊ, ಫೋಕ್ಸ್ ವ್ಯಾಗನ್ ಪೊಲೊ ಮತ್ತು ಇತ್ತೀಚೆಗೆ ರಸ್ತೆಗಿಳಿದ ಟೊಯೊಟಾ ಎಟಿಯೋಸ್ ಲಿವಾ ಕಾರುಗಳಿಗೆ ನೂತನ ಸ್ವಿಫ್ಟ್ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, August 17, 2011, 10:01 [IST]
English summary
Most anticipated car of the year All New Maruti Swift 2011 to Unveiled today 7 pm. Maruti Suzuki India as the official New Swift launch ceremony on August 17, 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+