ಹುರ್ರೆ ಸ್ವಿಫ್ಟ್ ಬಂತು, ದರ 4.22 ಲಕ್ಷ ರು.ನಿಂದ ಆರಂಭ

ಕಂಪನಿಯು ಸ್ವಿಫ್ಟನ್ನು ನೂತನ ಫ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸುತ್ತಿದೆ. ನೂತನ ಕಾರಿಗಾಗಿ ಸುಮಾರು 500 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ.
"ನೂತನ ಸ್ವಿಫ್ಟ್ ಕಾರಿಗೆ ಸಾಕಷ್ಟು ಬೇಡಿಕೆ ಬಂದ ಹಿನ್ನಲೆಯಲ್ಲಿ ಇಂದು ನಾವು ನೂತನ ಸ್ವಿಫ್ಟನ್ನು ಔಪಚಾರಿಕವಾಗಿ ಅನಾವರಣ ಮಾಡಿದ್ದೇವೆ. ಇದರ ಇಂಧನ ದಕ್ಷತೆ, ಆಕರ್ಷಕ ವಿನ್ಯಾಸ ಮತ್ತು ಸ್ಪೋರ್ಟಿ ಲುಕ್ ಹೆಚ್ಚು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ಸಿಇಒ ಶಿಂಜೊ ನಕನಿಶಿ ಹೇಳಿದ್ದಾರೆ.
ನೂತನ ಸ್ವಿಫ್ಟ್ ನಾಳೆ ಬೆಂಗಳೂರಿನ ದಿ ಲಲಿತ್ ಹೋಟೆಲ್ ನಲ್ಲಿ ಅನಾವರಣಗೊಳ್ಳಲಿದೆ. ಬೆಂಗಳೂರಿನಲ್ಲಿ ನೂತನ ಕಾರನ್ನು ಕಂಪನಿಯ ಸೇವಾ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಪಂಕಜ್ ನರೂಲಾ ಬಿಡುಗಡೆಗೊಳಿಸಲಿದ್ದಾರೆ.
ನೂತನ ಸ್ವಿಫ್ಟ್ ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಇದು ಕೆ-ಸೀರಿಸ್ 1.2 ಲೀಟರ್ ಪೆಟ್ರೊಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸಲ್ ಎಂಜಿನ್ ಹೊಂದಿದೆ.
ಇವೆರಡು ಆವೃತ್ತಿಗಳು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿವೆ. ನೂತನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಎಬಿಎಸ್, ಡ್ಯೂಯಲ್ ಎಸ್ಆರ್ಎಸ್ ಏರ್ ಬ್ಯಾಗ್, ಬ್ರೇಕಿಂಗ್ ಅಸಿಸ್ಟ್ ಸಿಸ್ಟಮ್(ಬಿಎಎಸ್) ಇತ್ಯಾದಿ ಫೀಚರ್ಸ್ ಗಳಿವೆ.


Click it and Unblock the Notifications








