ಒಬಾಮ ಸವಾರಿಗೆ 5 ಕೋಟಿ ರು.ನ ಸೂಪರ್ ಬಸ್

Barack Obama
ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿ ಸವಾರಿಗೆ ಐಷಾರಾಮಿ ಕಾರುಗಳಿವೆ. ರಾಜ್ಯದ ಮುಖ್ಯಮಂತ್ರಿ ಸವಾರಿಗೂ ವೆರ್ನಾ ಕಾರಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ ಬೆಂಝ್ ಸವಾರಿ ಸುರು ಮಾಡಿದ್ದಾರೆ. ನಮ್ಮ ದೇಶದಲ್ಲಿ ತಾಲೂಕುಮಟ್ಟದ ರಾಜಕಾರಣಿಯೂ ಐಷಾರಾಮಿ ಕಾರಲ್ಲಿ ಪ್ರಯಾಣಿಸುತ್ತಾರೆ.

ಹೀಗಿರುವಾಗ ಜಗತ್ತಿನ ದೊಡ್ಡಣ್ಣ ಎಂದು ಮೀಸೆ ತಿರುವುವ ಅಮೆರಿಕದ ಪರಿಸ್ಥಿತಿಯೂ ಹೀಗೆಯೇ ಇತ್ತು. ಅಲ್ಲೂ ಹೆಚ್ಚು ಭದ್ರತೆಯನ್ನು ನೀಡುವ ಕಾರುಗಳಲ್ಲಿ ಜನನಾಯಕರು ಸವಾರಿ ಮಾಡುತ್ತಾರೆ. ಆದರೆ ಇದೀಗ ಒಬಾಮಾ ಸವಾರಿ ವರಸೆ ಬದಲಾಗಿದೆ. ಅವರು ಇನ್ನು ಮುಂದೆ ಸೂಪರ್ ಬಸ್ ನಲ್ಲಿ ಸಂಚಾರಿಸುತ್ತಾರೆ.

ಸೂಪರ್ ಬಸ್ ಪ್ರಿವೊಸ್ಟ್ ಬಸ್ ನ್ನು ಕೆನಡಾದ ಕಂಪನಿಯೊಂದು ನಿರ್ಮಿಸಿದೆ. ಈ ಬಸ್ಸನ್ನು ವಿಶೇಷವಾಗಿ ರೂಪಿಸಿದ್ದು ಹೆಂಪಿಲ್ ಬ್ರದರ್ಸ್ ಕಂಪನಿ. ಈ ಕಂಪನಿಯು ಅಮೆರಿಕದ ಪ್ರಮುಖ ಇಂಟಿರಿಯರ್ ವಿನ್ಯಾಸಕ ಕಂಪನಿಯಾಗಿದೆ. ಈ ಪ್ರಿವೊಸ್ಟ್ ಬಸ್ ನ ದರ ಸುಮಾರು 1.1 ಮಿಲಿಯನ್ (ಅಂದಾಜು 5 ಕೋಟಿ ರು) ಡಾಲರ್ ಅಂತೆ!

ಈ ಬಸ್ ನ ಸುರಕ್ಷತೆಯ ಸ್ಟಾಂಡರ್ಡ್ ಉನ್ನತ ಮಟ್ಟದಾಗಿದೆ. ಇದರ ಬಾಡಿ ಮತ್ತು ಗ್ಲಾಸ್ ಗಳು ಬುಲೆಟ್ ಪ್ರೂಫ್ ಹೊಂದಿವೆ. ಸಣ್ಣ ಬಾಂಬ್ ಮತ್ತು ರಾಸಾಯನಿಕ ದಾಳಿಗಳಿಂದ ಪಾರಾಗುವಷ್ಟು ದೃಢತೆ ಈ ಬಸ್ಸಿಗಿದೆ. ತುರ್ತುಪರಿಸ್ಥಿತಿಗೆ ಬಳಸಲು ಬ್ಲಡ್ ಬ್ಯಾಂಕ್ ಇದೆ.

ಸುರಕ್ಷತೆ ಮಾತ್ರವಲ್ಲದೇ ಈ ಬಸ್ ಒಬಾಮಾನಿಗೆ ಪುಟ್ಟ ಮನೆಯೂ ಹೌದು. ಪುಟ್ಟ ಆಫೀಸ್ ಅಂದರೂ ಅಡ್ಡಿಯಿಲ್ಲ. ಸಂವಹನಕ್ಕೆ ಸ್ಯಾಟ್ ಲೈಟ್ ಆಧರಿತ ಸಿಸ್ಟಮ್ ಗಳಿವೆ. ಒಂದು ಲಿವಿಂಗ್ ರೂಮ್, ಒಂದು ವಿಶ್ರಾಂತಿ ಕೊಠಡಿ, ಆಹಾರ ಸೇವಿಸಲು ಕೊಂಚ ಸ್ಥಳ ಇದೆ. ಒಬಾಮಾ ಬಸ್ ಸುತ್ತಮುತ್ತ ಡಜನ್ ಸಂಖ್ಯೆಯಲ್ಲಿ ಭದ್ರತಾ ವಾಹನಗಳೂ ಇರಲಿವೆ.

ಒಬಾಮಾಗೆ ಈ ಬಸ್ ಯಾಕೆ ಎನ್ನುತ್ತೀರಾ? ದೇಶ ಸುತ್ತಲು ಪ್ರಮುಖವಾಗಿ ಬಳಸಲಿದ್ದಾರೆ ಅಂತೆ! ಜೊತೆಗೆ "ಒಬಾಮ ನಡಿಗೆ ಹಳ್ಳಿಕಡೆಗೆ" ಹೋಗಲು ಕೂಡ ಈ ಬಸ್ ಬಳಸುತ್ತಾರಂತೆ.

ಸದ್ಯ ತನ್ನ ಜನಪ್ರಿಯತೆ ಕುಗ್ಗದಂತೆ ನೋಡಿಕೊಳ್ಳಲು ದೇಶ ಸಂಚಾರವನ್ನು ಒಬಾಮಾ ಈ ಬಸ್ಸಿನಲ್ಲಿ ನಡೆಸಲಿದ್ದಾರಂತೆ. ಅಂದಹಾಗೆ ಕಂಪನಿಯು ಇಂತಹ ಎರಡು ಬಸ್ ನಿರ್ಮಿಸಿದೆ. ಇದರಲ್ಲಿ ಒಂದು ಒಬಾಮನಿಗೆ ಮತ್ತೊಂದು 2012ರ ಗಣತಂತ್ರ ಚುನಾವನೆಯಲ್ಲಿ ಗೆಲ್ಲೋ ಅಭ್ಯರ್ಥಿಗಂತೆ. ನಮ್ಮ ದೇಶದ ರಾಜಕಾರಣಿಗಳೂ ಇಂತಹ ಬಸ್ ಕೇಳಿದರೆ ಕಷ್ಟ!

More from DriveSpark

Article Published On: Monday, August 22, 2011, 11:45 [IST]
English summary
US president Barack Obama has a new vehicle in his parking lot. a sparkling black bus that will carry the US President in his nationwide tour. The bus built by a Canadian coach builder Prevost, is very much similar to the Cadillac limousine used by Obama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+