ಮಾರುತಿ ಸುಜುಕಿ ನಿರ್ಮಿಸಲಿದೆ ಜಾಗತಿಕ ಕಾರು

"ಜಾಗತಿಕ ಮಾರುಕಟ್ಟೆಗಾಗಿ ಕಾರೊಂದನ್ನು ಅಭಿವೃದ್ಧಿಪಡಿಸುವುದು ನಮ್ಮ ಮಹತ್ವದ ಗುರಿ. ರೊಹ್ತಾಕ್ ನಲ್ಲಿ ನಿರ್ಮಿಸುತ್ತಿರುವ ನಮ್ಮ ನೂತನ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ಆಂಡ್ ಡಿ) ವಿಭಾಗ ಉದ್ಘಾಟನೆಯಾದ ನಂತರ ನಾವು ಗ್ಲೋಬಲ್ ಕಾರಿನ ಕೆಲಸ ಸುರುಹಚ್ಚಲಿದ್ದೇವೆ" ಎಂದು ಕಂಪನಿಯ ಆರ್ಆಂಡ್ ಡಿ ವಿಭಾಗದ ವ್ಯವಸ್ಥಾಪಕರಾದ ಐವಿ ರಾವ್ ಹೇಳಿದ್ದಾರೆ.
ಮಾರುತಿ ಸುಜುಕಿ ಎಂಜಿನಿಯರುಗಳೇ ನೂತನ ಜಾಗತಿಕ ಕಾರು ಅಭಿವೃದ್ಧಿಪಡಿಸಲಿದ್ದಾರೆ. ಕಂಪನಿಯು ಈಗಾಗಲೇ ಸ್ವಿಫ್ಟ್ ಮತ್ತು ರಿಟ್ಜ್ ಮುಂತಾದ ಜಾಗತಿಕ ಕಾರುಗಳನ್ನು ಅಭಿವೃದ್ಧಿಪಡಿಸಿದೆ. ನೂತನ ಜಾಗತಿಕ ಕಾರು ಕಂಪನಿಯ ದೀರ್ಘಾವಧಿಯ ಯೋಜನೆಯಾಗಿದೆ. ಅಂದರೆ ಕಂಪನಿಯು 2017ರ ವೇಳೆಗೆ ಈ ಕಾರನ್ನು ಹೊರತರುವ ಸಾಧ್ಯತೆಯಿದೆ.
ರೊಹ್ತಾಕ್ ನ R&D ಕೇಂದ್ರಕ್ಕೆ ಕಂಪನಿಯು 1,500 ಕೋಟಿ ರು. ಹೂಡಿಕೆ ಮಾಡಿದೆ. ಇದು ಜಪಾನ್ ಹೊರಗಿನ ಕಂಪನಿಯ ಮೊದಲ ಸಂಶೋಧನೆ ಕೇಂದ್ರವಾಗಿದೆ. ಇದರ ನೂತನ ವಿಭಾಗದಲ್ಲಿ ಈಗಾಗಲೇ 800 ಸಿಸಿ ಎಂಜಿನ್ ಅಭಿವೃದ್ಧಿಪಡಿಸಲಾಗುತ್ತಿದೆ.


Click it and Unblock the Notifications








