ಅಮೆರಿಕನ್ನರಿಗೆ ಭಾರತದ ಕಾರುಗಳೆಂದರೆ ಅಲರ್ಜಿ!!

American Car Buyers
ಇದು ಜನಾಂಗೀಯ ವಿಷಯವಲ್ಲ. ಕರಿಯ ಬಿಳಿಯ ತಾರತಮ್ಯವಲ್ಲ. ಕಾರು ಲೋಕದಲ್ಲಿ ಬಣ್ಣಗಳಿಗಿಂತ ಗುಣಮಟ್ಟ, ದಕ್ಷತೆ ಇತ್ಯಾದಿ ವಿಷಯಗಳಿಗೆ ಹೆಚ್ಚು ಮಹತ್ವ. ಒಂದು ರೀತಿಯ ಸ್ವದೇಶಿ ಪ್ರೇಮ ಕೂಡ ಹೌದು. ಅಮೆರಿಕದ ಜನರಲ್ಲಿ ಹೋಗಿ ನಿಮ್ಗೆ "ಮೇಡ್ ಇನ್ ಇಂಡಿಯಾ" ಕಾರು ಬೇಕೆ? ಎಂದು ಕೇಳಿದರೆ ಹೆಚ್ಚಿನವರು ಅಡ್ಡಡ್ಡ ತಲೆಯಾಡಿಸುತ್ತ "ಬಿಲ್ ಕುಲ್ ಬೇಡ" ಎನ್ನುತ್ತಾರಂತೆ!

ಹೌದು, ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜಿಎಫ್ ಕೆ ಆಟೋಮೋಟಿವ್ ಅಧ್ಯಯನ ಈ ವಿಷಯವನ್ನು ಬಹಿರಂಗಪಡಿಸಿದೆ. ಅಲ್ಲಿನವರಿಗೆ ಭಾರತದ ಕಾರುಗಳೆಂದರೆ ಹೆಚ್ಚು ಇಷ್ಟವಿಲ್ಲವಂತೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 41ರಷ್ಟು ಅಮೆರಿಕದ ಯುವ ತಲೆಮಾರಿಗೆ ಭಾರತೀಯ ಕಾರು ಖರೀದಿಸುವ ಐಡಿಯಾವೇ ಇಲ್ಲವಂತೆ. ಆದರೂ ಶೇಕಡ 30ರಷ್ಟು ಜನರಿಗೆ ತುಸು ಆಸಕ್ತಿಯಿದೆ ಅನ್ನೋದೇ ಇಲ್ಲಿನ ಕಂಪನಿಗಳಿಗೆ ತುಸು ನೆಮ್ಮದಿ ಕೊಡೊ ಸಂಗತಿ.

ಭಾರತ ಮಾತ್ರವಲ್ಲ ಅಲ್ಲಿನವರಿಗೆ ಚೈನಿಸ್ ಕಾರುಗಳೂ ಇಷ್ಟವಿಲ್ಲವಂತೆ. ಚೀನಾದ ಬಿವೈಡಿ ಮತ್ತು ಚೆರ್ರಿ ಕಂಪನಿಗಳು ಈಗಾಗಲೇ ದೊಡ್ಡಣ್ಣನ ಊರಲ್ಲಿ ಕಾರು ಮಾರಾಟ ಮಾಡುತ್ತಿವೆ.

ಭಾರತದ ಕಾರುಗಳು ಇಂಧನ ದಕ್ಷತೆಯ ವಿಷ್ಯದಲ್ಲಿ ಅಮೆರಿಕದ ಜನರಿಗೆ ಇಷ್ಟವಾಗುತ್ತದೆ. ಆದರೆ ಇಂಟಿರಿಯರ್ ಸ್ಥಳಾವಕಾಶ ಇತ್ಯಾದಿಗಳು ಇಷ್ಟವಾಗುವುದಿಲ್ಲವಂತೆ.

ದೇಶದ ಕಾರು ಕಂಪನಿಗಳು ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಪಾಲು ಪಡೆಯಲು ಹವಣಿಸುತ್ತಿವೆ. ಮಹೀಂದ್ರ ಈಗಾಗಲೇ ಅಮೆರಿಕದಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ತರುವುದಾಗಿ ಹೇಳಿದೆ. ಉತ್ತರ ಅಮೆರಿಕ ಕಾಂಟಿನೆಂಟಲ್ ನಲ್ಲಿ ಕಾರು ಮಾರಾಟ ಮಾಡಲು ನಮ್ಮ ದೇಶದ ಕಂಪನಿಗಳು ಅತೀವ ಉತ್ಸಾಹ ತೋರುತ್ತಿವೆ.

ಮತ್ತೆ ಅಮೆರಿಕದ ಜನರಿಗೆ ಇಷ್ಟವಾಗುವ ಕಾರುಗಳು ಯಾವುವು? ಅಧ್ಯಯನದ ಪ್ರಕಾರ ಅಮೆರಿಕನ್ನರಿಗೆ ಅಮೆರಿಕದ ಕಾರೇ ಹೆಚ್ಚು ಇಷ್ಟವಂತೆ. ನಂತರದ ಸ್ಥಾನ ಜರ್ಮನಿ, ಜಪಾನ್ ಮತ್ತು ಕೊರಿಯಾದ ಕಾರುಗಳಿಗಂತೆ. ಟಾಟಾ ಮೋಟರ್ಸ್ ನ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗೆ, ಸ್ವೀಡನಿನ ವೊಲ್ವೊಗೆ ಅಮೆರಿಕದಲ್ಲಿ ತುಸು ಬೇಡಿಕೆಯಿದೆ.

More from DriveSpark

Article Published On: Wednesday, August 24, 2011, 10:23 [IST]
English summary
Indian carmakers are now foraying in to more and more international markets. While Indian carmakers are enthusiastic about selling their cars in the North American continent, a recent study by market research firm GfK Automotive has revealed that Americans are not open to the idea of buying cars made in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+