ಅಕ್ಟೋಬರ್ ನಲ್ಲಿ 2.5 ಲಕ್ಷ ರು.ನ ಹ್ಯುಂಡೈ ಕಾರು

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ನೂತನ ಸಣ್ಣಕಾರಿನ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಮೂಲಗಳ ಪ್ರಕಾರ ಗ್ಯಾಸೊಲಿನ್ ಎಂಜಿನ್ ಕಾರು ಎಚ್800 ಕಾರಿನ ಉತ್ಪಾದನೆ ಆರಂಭವಾಗುವ ಪ್ರಕ್ರಿಯೆಯಲ್ಲಿದೆಯಂತೆ.
ಆಗಸ್ಟ್ ಅಂತ್ಯಕ್ಕೆ ಮುನ್ನ ನೂತನ ಕಾರಿನ ಬಿಡಿಭಾಗಗಳನ್ನು ಪೂರೈಕೆ ಮಾಡುವಂತೆ ಹ್ಯುಂಡೈ ಮೋಟರ್ ತಿಳಿಸಿದೆ ಎಂದು ಅವರು ಹೇಳಿದೆ. ಆದರೆ ಅವರು ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲಿಲ್ಲ. ನೂತನ ಸಣ್ಣಕಾರು ಸ್ಯಾಂಟ್ರೊಗಿಂತಲೂ ಅಗ್ಗವಾಗಿರಲಿದೆ ಎಂದು ಅವರು ಹೇಳುತ್ತಾರೆ.
ಹ್ಯುಂಡೈ ಮೋಟರ್ ಇಂಡಿಯಾ ಕಂಪನಿಯ ಅಗ್ಗದ ಕಾರುಗಳಲ್ಲಿ ಸ್ಯಾಂಟ್ರೊ ಪ್ರಮುಖವಾಗಿದೆ. 1.1 ಲೀಟರ್ ಗ್ಯಾಸೊಲಿನ್ ಎಂಜಿನ್ ಹೊಂದಿರುವ ಸ್ಯಾಂಟ್ರೊ ದರ ಸುಮಾರು 2.8 ಲಕ್ಷ ರುಪಾಯಿ ಇದೆ. ಈ ಕಾರು ಅತ್ಯಾಕರ್ಷಕ ಪವರ್ ಮತ್ತು ಮೈಲೇಜಿಗೆ ಹೆಸರು ಪಡೆದಿದೆ.


Click it and Unblock the Notifications








