ಸೂರಿ ಸವಾರಿ: ಸೌರಶಕ್ತಿಯ ಕಾರಿಗೆ ಬಹುಪರಾಕ್

ಫೋರ್ಡ್ ಕಂಪನಿಯು ಸೂರ್ಯನನ್ನು ನೋಡಿ ಯುರೇಕಾ ಎಂದು ಬಿಟ್ಟಿತ್ತು. ಇದೀಗ ಸಂಪೂರ್ಣವಾಗಿ ಸೋಲಾರ್ ಪವರ್ ನಿಂದ ಚಲಿಸುವ ಕಾರನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ.
ಸದ್ಯ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳ ಕರೆಂಟ್ ಪ್ಲಗ್ ಗೆ ಸೌರಶಕ್ತಿಯ ಪ್ಲಗ್ ಜೋಡಿಸುವುದು ಫೋರ್ಡ್ ಯೋಜನೆ. ಕಂಪನಿ ಪ್ರತಿಪಾದಿಸುವ ಪ್ರಕಾರ ಒಂದು ಸೋಲರ್ ಪ್ಯಾನೆಲ್ ನಿಂದ ವರ್ಷಕ್ಕೆ 16 ಸಾವಿರ ಕಿ.ಮೀ. ಕಾರು ಡ್ರೈವಿಂಗ್ ಮಾಡಬಹುದಾಗಿದೆಯಂತೆ.
ಸೋಲಾರ್ ಪ್ಯಾನೆಲ್ ನಿಂದ ಪ್ರತಿವರ್ಷ 3 ಸಾವಿರ ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಹೀಗಾಗಿ ಸೌರಶಕ್ತಿಯನ್ನು ಎಲೆಕ್ಟ್ರಿಕ್ ಕಾರುಗಳಿಗೆ ಬಳಸುವ ಕುರಿತು ಕಂಪನಿಗಳು ಆಲೋಚಿಸುತ್ತಿವೆ.
ಕಾರು ಕಂಪನಿಗಳು ಈಗ ಪೂರ್ಣಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಿಸುತ್ತಿವೆ. ನಿಸ್ಸಾನ್ ಲೀಫ್, ಮಿಟ್ಸುಬಿಸಿ ಕಂಪನಿಯು iMiev ಎಲೆಕ್ಟ್ರಿಕ್ ಕಾರನ್ನು ಹೊರತಂದಿದೆ. ಸದ್ಯ ಅಮೆರಿಕದ ರಸ್ತೆಯಲ್ಲಿರುವ ಫೋರ್ಡ್ ಎಲೆಕ್ಟ್ರಿಕ್ ಕಾರಿಗೆ ಸೋಲಾರ್ ಪ್ಯಾನೆಲ್ ಜೋಡಿಸಲಾಗುವುದಂತೆ.
ಎಲೆಕ್ಟ್ರಿಕ್ ಕಾರುಗಳು ಪರಿಸರ ಸ್ನೇಹಿ. ಆದರೆ ಕರೆಂಟ್ ಚಾರ್ಜ್ ಬಳಸುವ ಎಲೆಕ್ಟ್ರಿಕ್ ಕಾರುಗಳು ಪೂರ್ಣಪ್ರಮಾಣದ ಪರಿಸರ ಸ್ನೇಹಿ ಎಂದು ಹೇಳಲಾಗುವುದಿಲ್ಲ. ಫೋರ್ಡ್ ಕಂಪನಿಯ ನೂತನ ಸೋಲರ್ ಪ್ಯಾನೆಲ್ ನಿಜಕ್ಕೂ ಪರಿಸರ ಸ್ನೇಹಿಯಾಗಲಿದೆ.
ಕೆಲವು ಕಾರುಗಳು ಈಗಾಗಲೇ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿವೆ. ಟೊಯೊಟಾ ಪ್ರಿಯೂಸ್, ಮಜ್ದಾ 929 ಮತ್ತು ಫಿಸ್ಕರ್ ಕಾರ್ಮಾ ಕಾರುಗಳಲ್ಲಿಯೂ ಸೌರಶಕ್ತಿ ಸಂಗ್ರಹವಾಗುತ್ತಿದೆ. ಆದರೆ ಇವೆಲ್ಲ ಪೂರ್ಣಪ್ರಮಾಣದಲ್ಲಿ ಸೌರಶಕ್ತಿಯಿಂದ ಚಲಿಸುವ ಕಾರುಗಳಲ್ಲ. ಸದ್ಯ ಫೋರ್ಡ್ ಅಭಿವೃದ್ಧಿಪಡಿಸುತ್ತಿರುವ ಕಾರು ಸಂಪೂರ್ಣವಾಗಿ ಸೋಲಾರ್ ಪವರ್ ಕಾರಾಗಲಿದೆ. ಸೌರಶಕ್ತಿ ಚಾಲಿತ ಕಾರುಗಳಿಗೆ ಸ್ವಾಗತ.


Click it and Unblock the Notifications








