ದೇಶಕ್ಕೆ ಬಂತು ಪೊಲಾರಿಷ್ ಆಫ್ ರೋಡ್ ವಾಹನ

Polaris Vehicles in India
ಡಾಮರ್ ರಸ್ತೆ ಯಾರಿಗೆ ಬೇಕು? ಬೆಟ್ಟದ ದಾರಿಗಳಲ್ಲಿ, ಮಣ್ಣಿನ ರಸ್ತೆಗಳಲ್ಲಿ, ಕೊರಕಲು ರಸ್ತೆಗಳಲ್ಲಿ, ಒಟ್ಟಾರೆ ರಸ್ತೆ ಎಂಬ ಚೂರು ಕುರುಹು ಇರುವ ಸ್ಥಳಗಳಲ್ಲಿ ಚಾಲನೆ ಮಾಡಬಹುದಾದ ವಿಶೇಷ ವಾಹನಗಳು ಭಾರತಕ್ಕೆ ಬಂದಿವೆ.

ಅಮೆರಿಕ ಮೂಲದ ಪೊಲಾರಿಷ್ ಕಂಪನಿಯ ಆಫ್-ರೋಡ್ ವಾಹನಗಳನ್ನು ಪರಿಚಯಿಸಿವೆ. ಇಲ್ಲಿ ಸುಮಾರು 2.4 ಲಕ್ಷ ರು.ನಿಂದ 20 ಲಕ್ಷ ರುಪಾಯಿವರೆಗಿನ ಪೊಲಾರಿಷ್ ಆಫ್-ರೋಡ್ ವಾಹನಗಳು ದೊರಕಲಿವೆ.

ಕಂಪನಿಯು ಮುಂದಿನ 5 ವರ್ಷಗಳೊಳಗೆ ಭಾರತದಲ್ಲಿ ಘಟಕ ನಿರ್ಮಿಸಲಿದೆಯಂತೆ. ಇಲ್ಲಿ ಸುಮಾರು 40 ಕೋಟಿ ಡಾಲರ್ ಆದಾಯ ಸಂಪಾದಿಸುವ ನಿರೀಕ್ಷೆಯನ್ನೂ ಕಂಪನಿ ವ್ಯಕ್ತಪಡಿಸಿದೆ. ಸದ್ಯ ಕಂಪನಿಯು ಆಫ್-ರೋಡರ್ಸ್ ಗಳನ್ನು ಅಮೆರಿಕ ಮತ್ತು ಮೆಕ್ಸಿಕೊದಿಂದ ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ.

ಈ ವಾಹನಗಳು ಭಾರತದಲ್ಲಿಯೇ ಉತ್ಪಾದನೆಯಾದರೆ ಕಡಿಮೆ ದರಕ್ಕೆ ನೀಡಬಹುದು ಎಂದು ಕಂಪನಿ ಹೇಳಿದೆ. ಯಾಕೆಂದರೆ ಆಮದು ಸುಂಕ ಶೇಕಡ 110ರಷ್ಟು ನೀಡುವುದು ಆಫ್ ರೋಡ್ ವಾಹನಗಳನ್ನು ದುಬಾರಿಯಾಗಿಸಲಿದೆ. ಕಂಪನಿಯು ಸ್ಥಳೀಯ ಪಾಲುದಾರರು ಮತ್ತು ಬಿಡಿಭಾಗಗಳ ಪೂರೈಕೆದಾರರ ಹುಡುಕಾಟದಲ್ಲಿದೆ.

More from DriveSpark

Article Published On: Thursday, August 25, 2011, 12:55 [IST]
English summary
Polaris, the US based off-road vehicle manufacturer, which launched its vehicles priced between Rs.2.4 lakhs and Rs.20 lakhs. The company said it would set up a plant in India within the next five years and is expecting revenues of up to $400 million.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+