ಗಾಳಿ ಬೈಕ್ : ರಾಮಯ್ಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಇಂಧನ ದರಗಳು ಗಗನಕ್ಕೇರುತ್ತಿವೆ. ಹೀಗೆಯೇ ಮುಂದುವರೆದರೆ ಬೈಕ್, ಕಾರುಗಳ ಸವಾರಿಗೆ ತಿಲಾಂಜಲಿ ಇಡಬೇಕಾಗುತ್ತದೆ. ಪೆಟ್ರೊಲ್, ಡೀಸೆಲ್ ಹಾಕದೇ ಚಲಿಸುವ ವಾಹನವಿದ್ದರೆ ಚೆನ್ನಾಗಿರುತ್ತಿತ್ತು ಅಂತ ಹೆಚ್ಚಿನವರು ಕನಸು ಕಾಣುತ್ತಿರಬಹುದು.

ಪೆಟ್ರೊಲ್ ಡೀಸೆಲ್ ಗೆ ಪರ್ಯಾಯವಾಗಿ ಯಾವ ಇಂಧನ ಬಳಸಬಹುದು? ನೀರು, ಜೈವಿಕ ಇಂಧನಗಳ ಪ್ರಯೋಗದಿಂದ ಎಲ್ಲರೂ ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲಿ ಬೆಂಗಳೂರು ವಿದ್ಯಾರ್ಥಿಗಳ ತಂಡ ಗಾಳಿಯಿಂದ ಚಲಿಸೋ ಬೈಕೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಶುಟ್ಯೂಟ್ ಆಫ್ ಟೆಕ್ನಾಲಜಿಯ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಡಾ. ಎಸ್. ವಿ. ಪ್ರಕಾಶ್ ಮಾರ್ಗದರ್ಶನದಲ್ಲಿ ಸಂಕುಚಿತ ಗಾಳಿಯಿಂದ ಚಲಿಸುವ ಬೈಕನ್ನು ಅಭಿವೃದ್ಧಿಪಡಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಈ ಏರ್ ಬೈಕ್ ಹೆಚ್ಚಿನವರ ಗಮನ ಸೆಳೆದಿದೆ. ಈ ಬೈಕ್ ಕಂಪ್ರೆಸ್ಡ್ ಅಥವಾ ಸಂಕುಚಿತ ಗಾಳಿಯಿಂದ ಕಾರ್ಯನಿರ್ವಹಿಸುತ್ತದೆ. 12 ವೋಲ್ಟೆಜ್ ಬ್ಯಾಟರಿ ಶಕ್ತಿಯ ಏರ್ ಕಂಪ್ರೆಸರನ್ನು ಬೈಕಿನ ಬಾಡಿಗೆ ಅಳವಡಿಸಲಾಗಿದೆ. ಈ ಸಾಧನ ಸಂಕುಚಿತ ಗಾಳಿಯನ್ನು ಎಂಜಿನ್ ಗೆ ರವಾನಿಸುತ್ತದೆ. ಎಂಜಿನ್ ಇದನ್ನು ಇಂಧನವಾಗಿ ಬಳಸಿಕೊಳ್ಳುತ್ತದೆ.

ವಿದ್ಯಾರ್ಥಿಗಳ ಈ ಪ್ರಾಜೆಕ್ಟ್ ಬೈಕ್ ಪರಿಸರಕ್ಕೆ ಸಹಕಾರಿ. ಇದು ವಾತಾವರಣಕ್ಕೆ ಹೊರಸೂಸುವ ಇಂಗಾಲದ ಪ್ರಮಾಣ ಶೂನ್ಯ. ಇದರ ಸವಾರಿ ವೆಚ್ಚವೂ ಕಡಿಮೆ. ಸದ್ಯ ರಸ್ತೆಯಲ್ಲಿರುವ ಯಾವುದೇ ಬೈಕುಗಳಿಗೂ ಇದನ್ನು ಒಂದಿಷ್ಟು ಮಾರ್ಪಾಡುಗೊಳಿಸಿ ಅಳವಡಿಸಬಹುದಂತೆ.

ರಾಮಯ್ಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಈ ಪ್ರಾಜೆಕ್ಟ್ ಬೈಕ್ "ಸೊಸೈಟಿ ಆಫ್ ಮೆಕಾನಿಕಲ್ ಎಂಜಿನಿಯರ್ಸ್ ನಿಂದ " ಅತ್ಯುತ್ತಮ ಪ್ರಾಜೆಕ್ಟೆಂಬ ಪ್ರಶಸ್ತಿ ಪಡೆದಿದೆ. ಇದು ವಾಹನ ಎಂಜಿನಿಯರುಗಳ ಒಕ್ಕೂಟದ ಪ್ರಬಂಧ ಮಂಡನೆಗೂ ಆಯ್ಕೆಯಾಗಿದೆ.

More from DriveSpark

Article Published On: Monday, August 29, 2011, 12:44 [IST]
English summary
Engineering students from M S Ramaiah Institute of Technology have developed a new motorcycle that runs on compressed air. The bike has an air compressor that pushes in air in to the engine. The students claim the engine can run up to 6000rpm. This air bike is a zero emission bikes and the running costs are also extremely low.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+