ಮುಂದಿನ 5 ವರ್ಷದಲ್ಲಿ 20 ಹೊಸ ಮಾರುತಿ ಕಾರು

Maruti Suzuki
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಹೊಸದಾಗಿ 15-20 ಕಾರುಗಳನ್ನು ಪರಿಚಯಿಸಲಿದೆ. ಮುಂದಿನ 5 ವರ್ಷದಳೊಗೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಕಾರುಗಳನ್ನು ಅನಾವರಣ ಮಾಡಲು ಕಂಪನಿ ನಿರ್ಧರಿಸಿದೆ.

ರಸ್ತೆಗಿಳಿಯಲಿರುವ 20 ಕಾರುಗಳಲ್ಲಿ ಶೇಕಡ 70-80ರಷ್ಟು ಸಣ್ಣಕಾರು ಸೆಗ್ಮೆಂಟಿಗೆ ಬರಲಿವೆ. ಇದರಲ್ಲಿ ಕೆಲವು ಹಳೆಯ ಆವೃತ್ತಿಗಳನ್ನು ಪರಿಷ್ಕರಿಸುವುದು ಸೇರಿರುವ ನಿರೀಕ್ಷೆಯಿದೆ.

ಕಂಪನಿಯು 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಸ್ವಿಫ್ಟ್ ಡಿಜೈರ್ ಪರಿಚಯಿಸಲು ನಿರ್ಧರಿಸಿದೆ. ಇದರೊಂದಿಗೆ ಫೇಸ್ ಲಿಫ್ಟ್ ಏಸ್ಟಾರ್, ಬ್ಯಾಕ್ ಲಿಫ್ಟ್ ರಿಟ್ಜ್ , ನೂತನ ಆಲ್ಟೊ800 ಮುಂತಾದ ಕಾರುಗಳು ರಸ್ತೆಗಿಳಿಯಲಿವೆ.

ನೂತನ ಕಾರುಗಳನ್ನು ಅಭಿವೃದ್ಧಿಪಡಿಸಲು ಕಂಪನಿಯು 1,000-1,500 ಕೋಟಿ ರು. ಹೂಡಿಕೆ ಮಾಡಲಿದೆ. ರೋಹ್ತಾಕ್ ನಲ್ಲಿರುವ ಕಂಪನಿಯ ನೂತನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ 2014ರ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

More from DriveSpark

Article Published On: Monday, August 29, 2011, 15:21 [IST]
English summary
India's largest car maker Maruti Suzuki aims 15-20 new models in next 5 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+