ಜಗತ್ತಿನಲ್ಲಿ ಒಟ್ಟು ಎಷ್ಟು ವಾಹನಗಳಿವೆ ಗೊತ್ತೆ?
2010ರ ಅಂತ್ಯಕ್ಕೆ ಜಗತ್ತಿನ ಒಟ್ಟಾರೆ ವಾಹನಗಳ ಸಂಖ್ಯೆ 100 ಕೋಟಿ ಯುನಿಟ್ ಗೆ ತಲುಪಿದೆ ಎಂದು ವಾರ್ಡ್ ರಿಸರ್ಚ್ ತಿಳಿಸಿದೆ. ಕಂಪನಿಯು ಸರಕಾರಿ ದಾಖಲೆಗಳು ಮತ್ತು ಐತಿಹಾಸಿಕ ವಾಹನ ಟ್ರೆಂಡ್ ಆಧರಿಸಿ ಈ ಮಾಹಿತಿ ಬಹಿರಂಗಪಡಿಸಿದೆ.
ಜಾಗತಿಕ ವಾಹನ ದಾಖಲಾತಿ ಟ್ರೆಂಡ್ 2009ರಲ್ಲಿ 98 ಕೋಟಿ ಯೂನಿಟ್ ಇತ್ತು. 2010ರ ಅಂತ್ಯಕ್ಕೆ 105 ಕೋಟಿ ಯೂನಿಟ್ ಗೆ ತಲುಪಿದೆ. ಈ ವಾಹನಗಳಲ್ಲಿ ಕಾರು, ಹಗುರ ಮಧ್ಯಮ ಮತ್ತು ಭಾರಿ ಟ್ರಕ್ ಮತ್ತು ಬಸ್ಸುಗಳೂ ಸೇರಿವೆ. ಆದರೆ ಇದರಲ್ಲಿ ಆಫ್ ರೋಡ್ ಮತ್ತು ಭಾರಿ ಸುಂಕದ ವಾಹನಗಳು ಸೇರಿಲ್ಲ.
ಜನಸಂಖ್ಯೆಯಂತೆಯೇ ವಾಹನ ಸಂಖ್ಯೆಯಲ್ಲೂ ಚೀನಾದ ಕೊಡುಗೆ ಹೆಚ್ಚು. ಈ ದೇಶದಲ್ಲಿ ವಾಹನಗಳ ಸಂಖ್ಯೆ 2010ಕ್ಕೆ ಶೇಕಡ 27.5ರಷ್ಟು ಹೆಚ್ಚಾಗಿದೆ.
ಒಟ್ಟಾರೆ ಜಾಗತಿಕವಾಗಿ ವಾಹನಗಳ ಸಂಖ್ಯೆಗಳು ಹೆಚ್ಚಾಗುವುದರಲ್ಲಿ ಅರ್ಧದಷ್ಟು ಚೀನಾದ ಕೊಡುಗೆಯಿದೆ. ಚೀನಾದಲ್ಲಿ 7.8 ಕೋಟಿ ವಾಹನಗಳಿವೆ. ಎರಡನೇ ಸ್ಥಾನವನ್ನು ಜಪಾನ್ ಪಡೆದಿದೆ. ಅಲ್ಲಿ 7.39 ಕೋಟಿ ವಾಹನಗಳಿವೆ.
ಭಾರತ ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ಸ್ಥಾನ ಪಡೆದರೂ ವಾಹನ ಸಂಖ್ಯೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಭಾರತದ ವಾಹನ ಸಂಖ್ಯೆ 2009ರಲ್ಲಿ 1.91 ಕೋಟಿ ಯುನಿಟ್ ಇದ್ದದ್ದು 2010ಕ್ಕೆ 2.08 ಕೋಟಿಗೆ ತಲುಪಿದೆ.


Click it and Unblock the Notifications









