ಹ್ಯುಂಡೈ ಎಚ್800 ದರ 3 ಲಕ್ಷ ರು.ಗಿಂತ ಕಡಿಮೆ!!

ಹೆಸರಿನಲ್ಲೇನಿದೆ? ದರದ ವಿಷ್ಯ ಏನಾದ್ರು ಗೊತ್ತಾಯ್ತಾ ಅಂತ ಕೇಳುವರಿಗೂ ಉತ್ತರ ಇಲ್ಲಿದೆ. ನೂತನ ಕಾರಿನ ದರ 3 ಲಕ್ಷ ರು.ಗಿಂತ ಕಡಿಮೆ ಇರುವ ನಿರೀಕ್ಷೆಯನ್ನು ಕಂಪನಿ ಮೂಲಗಳು ವ್ಯಕ್ತಪಡಿಸಿವೆ. ಈ ಕಾರು ಮಾರುತಿ ಆಲ್ಟೊ ಮತ್ತು ಷೆವರ್ಲೆ ಸ್ಪಾರ್ಕ್ ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಕಂಪನಿಯು ಈ ಕಾರಿನ ಮೇಲೆ ಸಾಕಷ್ಟು ಭರವಸೆ ಇಟ್ಟಿದೆ. ಅಂದರೆ ಭಾರತದ ಸಣ್ಣಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಗಳಿಸಲು ಹ್ಯುಂಡೈ 800 ಕಾರು ನೆರವಾಗುವ ನಿರೀಕ್ಷೆಯ ಕಂಪನಿಯದ್ದು. ಇದರ ದರವೂ ಕಡಿಮೆ ಇರುವುದರಿಂದ ಆಲ್ಟೊಗೆ ಪ್ರಬಲ ಪೈಪೋಟಿ ನೀಡಲಿದೆ.
ಆದರೂ ಈ ಕಾರು ಯಾವಾಗ ಅನಾವರಣಗೊಳುತ್ತೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಕೆಲವರ ಪ್ರಕಾರ ದೀಪಾವಳಿ ಹಬ್ಬದ ಸೀಸನ್ ಅಂದ್ರೆ ಅಕ್ಟೋಬರ್ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಹಾಗಾದರೆ ಈ ಕಾರು ರಸ್ತೆಗಿಳಿಯಲು ಹೆಚ್ಚು ದಿನ ಕಾಯಬೇಕಿಲ್ಲ ಅಂದಾಯ್ತು. ಹ್ಯುಂಡೈ ಕಂಪನಿಯ 800 ಸಿಸಿ ಎಂಜಿನ್ ಕಾರು ಬೇಕಾದವರು ಈಗಲೇ ಪ್ಲಾನ್ ಮಾಡಬಹುದು.


Click it and Unblock the Notifications








