ಮಾನೆಸರ್: ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ

ಕಳೆದ ವಾರ ಈ ಘಟಕದಲ್ಲಿ ಉತ್ಪಾದಿಸಲಾದ ಕಾರುಗಳ ಗುಣಮಟ್ಟ ಚೆನ್ನಾಗಿರದ ಕಾರಣ ಕಂಪನಿಯು ಉತ್ಪಾದನೆ ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಉತ್ಪಾದನೆ ಗುಣಮಟ್ಟ ಕೊರತೆಗೆ ನೌಕರರ ಕಾರ್ಯನಿರ್ವಹಣೆ ಪ್ರಮುಖ ಕಾರಣ ಎಂದು ಕಂಪನಿ ಸ್ಥಗಿತಗೊಳಿಸಿದೆ.
ಕಂಪನಿಯು ಸುಮಾರು ಹತ್ತು ಸಿಬ್ಬಂದಿಗಳನ್ನು ಸಸ್ಪೆಂಡ್ ಮತ್ತು 5 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇದೀಗ ನೌಕರರ ನಿಷ್ಠೆ ಬಯಸಿದ ಕಂಪನಿಯು ಉತ್ತಮ ಗುಣನಡತೆ ಬಾಂಡ್ ಪೇಪರಿಗೆ ಸಹಿ ಹಾಕುವಂತೆ ಹೇಳಿದೆ.
ಮಾರುತಿ ಸುಜುಕಿ ಕಳೆದ ಮೂರು ತಿಂಗಳಲ್ಲಿ ಮಾಡುತ್ತಿರುವ ಮೂರನೇ ಉತ್ಪಾದನೆ ಸ್ಥಗಿತ ಇದಾಗಿದೆ. ಕಳೆದ ಜೂನ್ ನಲ್ಲಿ ನೌಕರರ ಮುಷ್ಕರ ಹಿನ್ನಲೆಯಲ್ಲಿ ಹತ್ತು ದಿನಕ್ಕಿಂತಲೂ ಹೆಚ್ಚು ದಿನ ಉತ್ಪಾದನೆ ಸ್ಥಗಿತಗೊಂಡಿತ್ತು. ಜುಲೈನಲ್ಲೂ ಒಂದು ದಿನ ಉತ್ಪಾದನೆ ಸ್ಥಗಿತಗೊಂಡಿತ್ತು.


Click it and Unblock the Notifications








