ಮಾರುತಿ ಸಿಬ್ಬಂದಿಗಳ ಅಮಾನತು, ಟ್ರೈನಿಗಳಿಗೂ ಕುತ್ತು

ನವದೆಹಲಿ, ಆಗಸ್ಟ್ 30: ಮಾರುತಿ ಸುಜುಕಿಯ ಮಾನೆಸರ್ ಘಟಕದಲ್ಲಿ ನೌಕರರ ಮತ್ತು ಆಡಳಿತ ಮಂಡಳಿಯ ಕಲಹ ಮುಂದುವರೆದಿದೆ. ಇಂದು ಕಂಪನಿಯು 16 ಖಾಯಂ ನೌಕರರನ್ನು ಅಮಾನತ್ತು ಮಾಡಿದೆ. ಜೊತೆಗೆ 12 ಟ್ರೈನಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.

"ಇಂದು ಕೂಡ ಕಂಪನಿ ಉತ್ಪಾದನೆ ನಡೆಸಿಲ್ಲ. ಗುತ್ತಿಗೆ ಕೆಲಸಗಾರರು ಮತ್ತು ತಾಂತ್ರಿಕ ಸಿಬ್ಬಂದಿ ಮುಂತಾದವರ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಇಂದು ಕೂಡ ಉತ್ಪಾದನೆ ಕೈಗೊಳ್ಳುವುದಿಲ್ಲ" ಎಂದು ಮಾರುತಿ ಸುಜುಕಿ ವಕ್ತಾರರು ಹೇಳಿದ್ದಾರೆ.

ಕಂಪನಿಯು ನಿನ್ನೆ 10 ಸಿಬ್ಬಂದಿಗಳನ್ನು ಅಮಾನತ್ತು, 5 ಜನರನ್ನು ಕೆಲಸದಿಂದ ವಜಾ ಮಾಡಿತ್ತು.. ಜೊತೆಗೆ ನಿನ್ನೆ ಆರು ಜನರು ಟ್ರೈನಿಗಳನ್ನೂ ಕೆಲಸದಿಂದ ಕಂಪನಿ ತೆಗೆದುಹಾಕಿದೆ. ಕಂಪನಿಯು ಕಳೆದ ವಾರ ಉತ್ಪಾದಿಸಿದ ಕಾರುಗಳ ಗುಣಮಟ್ಟ ಚೆನ್ನಾಗಿಲ್ಲದ ಕಾರಣದಿಂದ ನೌಕರರ ವಿರುದ್ಧ ಕಠಿಣ ನಿಲುವ ತಳೆದಿದೆ. ನೌಕರರ ಮುಷ್ಕರ ಕಂಪನಿಯ ಉತ್ಪಾದನೆ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ.

"ಇಂದು ಮತ್ತೆ ಕಂಪನಿಯು ನೌಕರರ ವಿರುದ್ಧ ಕ್ರಮ ಕೈಗೊಂಡಿದೆ. ಇಂದು ಸುಮಾರು 16 ಖಾಯಂ ನೌಕರರನ್ನು ವಜಾ ಮಾಡಲಾಗಿದೆ ಮತ್ತು 12 ಟ್ರೈನಿ ಟೆಕ್ನಿಷಿಯನ್ ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ" ಎಂದು ವಕ್ತಾರರು ಹೇಳಿದ್ದಾರೆ.

ಆದರೆ ನೌಕರರು ಹೇಳುವುದೇ ಬೇರೆ. ಜೂನ್ ತಿಂಗಳಲ್ಲಿ ನೌಕರರು ನಡೆಸಿದ 13 ದಿನಗಳ ಮುಷ್ಕರಕ್ಕೆ ಕಂಪನಿ ಪ್ರತಿಕಾರ ತೆಗೆದುಕೊಳ್ಳುತ್ತಿದೆ ಎಂದು ನೌಕರರು ಅಭಿಪ್ರಾಯಪಡುತ್ತಾರೆ. ಆದರೆ ಕಂಪನಿ ಸದ್ಯ ಕಳೆದ ವಾರ ಪರೀಕ್ಷಿಸಿದ ಕಾರುಗಳ ಗುಣಮಟ್ಟ ಚೆನ್ನಾಗಿಲ್ಲದ ನೆಪ ಹೇಳಿದೆ.

More from DriveSpark

Article Published On: Tuesday, August 30, 2011, 13:41 [IST]
English summary
Maruti Suzuki India continues to take stringent action against erring workers at Manesar. The Indian carmaker has suspended 16 more permanent workers and dismissed 12 trainees even as the tussle between the management and workers showing signs of escalation. Production at Manesar plant has come to a grinding halt after only a handful workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+