ನೂತನ ಜಾಝ್ ಹಳೆಯ ಜಾಝಿಗಿಂತ ಅಗ್ಗ

ದರ ಕಡಿಮೆಯಾಗಿರುವುದು ಕೆಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿರುವುದು ಸುಳ್ಳಲ್ಲ. ಅಗ್ಗದ ಜಾಝ್ ನ ಫೀಚರ್ಸ್ ಮತ್ತು ಗುಣಮಟ್ಟ ಕಡಿಮೆಯಾಗಿರುವುದೇ ಎಂಬ ಸಂಶಯ ಸಹಜ. ಆದರೆ ಹೋಂಡಾ ಜಾಝ್ ನೂತನ ಆವೃತ್ತಿಯನ್ನು ಹಳೆಯ ಜಾಝ್ ಗಿಂತ ಹೆಚ್ಚು ಗುಣಮಟ್ಟದಲ್ಲಿ ರೂಪಿಸಿರುವುದಾಗಿ ಹೇಳಿದೆ.
ನೂತನ ಜಾಝ್ ದರ ಕಡಿಮೆಯಾಗಿರುವುದರಿಂದ ಹಳೆಯ ಜಾಝ್ ಮತ್ತು ಸಿಟಿ ಸೆಡಾನ್ ಕಾರು ಮಾರಾಟಕ್ಕೆ ಹಿನ್ನಡೆಯಾಗುವುದಿಲ್ಲವೆಂದು ಕಂಪನಿ ಹೇಳಿದೆ.
ನೂತನ ಜಾಝ್ ಕಾರಿನಲ್ಲಿ ಹಳೆಯ ಮಾಡೆಲ್ ನ ಐಷಾರಾಮಿ ಫೀಚರುಗಳೆಲ್ಲ ಇವೆ. ಇದರೊಂದಿಗೆ ಕೆಲವು ಹೊಸ ಫೀಚರುಗಳನ್ನು ಅಳವಡಿಸಿದೆ. ದರ ಕಡಿಮೆಯಾಗಿರುವುದು ಏಕೆ ಎಂದು ಕಂಪನಿ ಎಲ್ಲೂ ಸ್ಪಷ್ಟಪಡಿಸಿಲ್ಲ. ಅಥವಾ ಇಷ್ಟೇ ಫಿಚರ್ಸ್ ಇರೋ ಹಳೆಯ ಕಾರಿಗೆ ಹೆಚ್ಚು ದರ ಯಾಕೆ ಪಾವತಿಸಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ.


Click it and Unblock the Notifications








