ನೂತನ ಸ್ಕೋಡಾ ಲಾರಾ ರಸ್ತೆಗೆ, ದರ ಮತ್ತು ವಿಮರ್ಶೆ

ನೂತನ ಸ್ಕೋಡಾ ಲಾರಾ ಕಾರು ಹೆಚ್ಚು ಕಂಫರ್ಟ್ ಮತ್ತು ಸುರಕ್ಷತೆಯ ಫೀಚರುಗಳೊಂದಿಗೆ ಬಂದಿದೆ. ಎಕ್ಸ್ ಟೀರಿಯರ್ ನೋಡಿದಾಗ ಇದು ಹಳೆಯ ಲಾರಾಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇಂಟಿರಿಯರ್ ಗೆ ಇಣುಕಿದಾಗ ಆಕರ್ಷಕ ವಿನ್ಯಾಸ, ಸ್ಪೋರ್ಟಿ ಸ್ಟೇರಿಂಗ್ ವೀಲ್ ಇಷ್ಟವಾಗುತ್ತದೆ. ಈ ಕಾರಿನಲ್ಲಿ ಯಾವೆಲ್ಲ ಫೀಚರ್ಸ್ ಇವೆ ಎಂದು ನೋಡೋಣ.
ಲಾರಾ ಆರ್ಎಸ್ ಕಾರು ನಿರ್ಮಾಣಕ್ಕೆ ಕಂಪನಿಯ ಹಳೆಯ ಮಾದರಿ ಒಕ್ಟಾವಿಯ ಆರ್ಎಸ್ ಸ್ಪೂರ್ತಿಯಂತೆ. ನೂತನ ಕಾರು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ನೂತನ ಕಾರು ಸ್ಪೋರ್ಟಿ ಸವಾರಿಗೆ ಸೂಕ್ತವಾಗಿದೆ ಎಂದು ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂತನ ಲಾರಾ ವಿಶೇಷತೆಗಳು
* ಸ್ಪೋರ್ಟಿ ಮತ್ತು ಆಕರ್ಷಕ ವಿನ್ಯಾಸ
* ಗುಣಮಟ್ಟದ ಚರ್ಮದ ಸೀಟುಗಳು
* 3 ಸ್ಟ್ರೋಕ್ ಮಲ್ಟಿ ಫಂಕ್ಷನ್ ಲೀದರ್ ಸ್ಟೇರಿಂಗ್
* 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್
* ನೂತನ 16 ಇಂಚಿನ ಹತ್ತು ಸ್ಪೋಕ್ ಅಲಾಯ್ ವೀಲ್
* ಬೂಟ್ ಏರೋ ಡೈನಾಮಿಕ್ ವಿನ್ಯಾಸ
* ಡ್ಯೂಯಲ್ ಎಗ್ ಹಾಸ್ಟ್
* ಕ್ಷೆನನ್ ಕರ್ವ್ ಪ್ರಾಜೆಕ್ಟ್ ಹೆಡ್ ಲೈಟ್
* ನೂತನ ಫಾಗ್ ಲೈಟ್ ಮತ್ತು ಎಲ್ ಇಡಿ ಫೀಚರಿನ ಲ್ಯಾಂಪುಗಳು
* ದರ: 15.19 ಲಕ್ಷ ರುಪಾಯಿ.


Click it and Unblock the Notifications








