ಹ್ಯುಂಡೈ ಪ್ರಗತಿ ನೀರಸ: ಸಕ್ಸೆನಾ ಹೇಳಿದ ಕಾರಣ

Hyundai Motor India
ನವದೆಹಲಿ, ಸೆ 02: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ ಆಗಸ್ಟ್ ತಿಂಗಳ ಮಾರಾಟ ಕೇವಲ ಶೇಕಡ 1ರಷ್ಟು ಏರಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು 51,030 ಕಾರು ಮಾರಾಟ ಮಾಡಿದರೆ, ಇದಕ್ಕೂ ಹಿಂದಿನ ವರ್ಷದ ಇದೇ ತಿಂಗಳಲ್ಲಿ 50,633 ಯೂನಿಟ್ ಕಾರು ಮಾರಾಟ ಮಾಡಿತ್ತು.

"ವಾಹನ ಮಾರುಕಟ್ಟೆ ಕಠಿಣ ದಿನಗಳಲ್ಲಿವೆ. ಸದ್ಯ ಯಾವುದೇ ಚೇತರಿಕೆ ಕಾಣುವ ಸೂಚನೆಗಳಿಲ್ಲ" ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಇಂಧನ ದರಗಳ ಹೆಚ್ಚಳ, ಬ್ಯಾಂಕ್ ಬಡ್ಡಿದರ ಹೆಚ್ಚಳ ಮುಂತಾದ ಕಾರಣಗಳು ಗ್ರಾಹಕರ ಖರೀದಿ ಭಾವನೆ ಮೇಲೆ ಬೀರಿದ ಪರಿಣಾಮದಿಂದ ವಾಹನ ಮಾರಾಟ ಇಳಿಕೆ ಕಂಡಿದೆ ಎಂದು ಸಕ್ಸೆನಾ ಹೇಳಿದ್ದಾರೆ.

ಕಳೆದ ತಿಂಗಳು ಕಂಪನಿಯ ದೇಶಿ ಮಾರಾಟ 26,677 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳ 28,601 ಯೂನಿಟ್ ಗೆ ಹೋಲಿಸಿದರೆ ಶೇಕಡ 6.7 ಇಳಿಕೆ ಕಂಡಿದೆ.

ಆದರೆ ಇದೇ ಅವಧಿಯಲ್ಲಿ ಕಂಪನಿಯ ವಾಹನ ರಫ್ತು 24,353 ಯೂನಿಟ್ ಗೆ ತಲುಪಿದ್ದು ಶೇಕಡ 10.5ರಷ್ಟು ಹೆಚ್ಚಳವಾಗಿದೆ. ಕಂಪನಿಯು ಕಳೆದ ವರ್ಷದ ಆಗಸ್ಟ್ ನಲ್ಲಿ 22,032 ಕಾರು ರಫ್ತು ಮಾಡಿತ್ತು.

More from DriveSpark

Article Published On: Friday, September 2, 2011, 12:08 [IST]
English summary
The country's second-largest car maker Hyundai Motor India August(2011) sales up just 1 percent. "Automobiles market continues to be tough and there are no signs of recovery in the immediate future," said Hyundai marketing and sales director Arvind Saxena.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+