ಆಗಸ್ಟ್ ನಲ್ಲಿ ಮಾರುತಿ ಸುಜುಕಿ ಮಾರಾಟ ಇಳಿಕೆ

ಹರ್ಯಾಣದಲ್ಲಿರುವ ಮಾನೆಸರ್ ಘಟಕದಲ್ಲಿ ಕಂಪನಿಯು ಸ್ವಿಫ್ಟ್, ಎಸ್ಎಕ್ಸ್4 ಮತ್ತು ಎ-ಸ್ಟಾರ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು 1,04,791 ಯೂನಿಟ್ ಮಾರಾಟ ಮಾಡಿತ್ತು.
ಆದರೂ ಕಳೆದ ತಿಂಗಳು ಕಂಪನಿಯ ವಾಹನ ರಫ್ತು 14,353 ಯೂನಿಟ್ ಗೆ ತಲುಪಿ ಶೇಕಡ 18.48ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಇ ಕಂಪನಿಯು 12,117 ಕಾರುಗಳನ್ನು ರಫ್ತು ಮಾಡಿತ್ತು.
ಆದರೆ ಇದೇ ಅವಧಿಯಲ್ಲಿ ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ 63,296 ಕಾರು ಮಾರಾಟ ಮಾಡಿದ್ದು ಸುಮಾರು ಶೇಕಡ 19.21ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಕಂಪನಿಯು ದೇಶದಲ್ಲಿ 78,351 ಕಾರುಗಳನ್ನು ಮಾರಾಟ ಮಾಡಿತ್ತು.
ಎ-ಸ್ಟಾರ್, ಆಲ್ಟೊ, 800 ಮತ್ತು ವ್ಯಾಗನಾರ್ ಕಾರುಗಳ ಮಾರಾಟ 37,496 ಯೂನಿಟ್ ಗೆ ತಲುಪಿ ಶೇಕಡ 18.34ರಷ್ಟು ಇಳಿಕೆ ಕಂಡಿದೆ. ಎಸ್ಟಿಲೊ, ಸ್ವಿಫ್ಟ್ ಮತ್ತು ರಿಟ್ಜ್ ಸೇರಿದಂತೆ ಕಾಂಪ್ಯಾಕ್ಟ್ ಕಾರುಗಳ ಮಾರಾಟ ಕೂಡ ಶೇಕಡ 26.93ರಷ್ಟು ಇಳಿಕೆ ಕಂಡಿದೆ.
ಡಿಜೈರ್ ಮಾರಾಟ ಶೇಕಡ 6.82ರಷ್ಟು ಮತ್ತು ಎಸ್ಎಕ್ಸ್4 ಮಾರಾಟ ಶೇಕಡ 7.57ರಷ್ಟು ಇಳಿಕೆ ಕಂಡಿದೆ. ಕಳೆದ ತಿಂಗಳು ಕಂಪನಿಯ ಐಷಾರಾಮಿ ಸೆಡಾನ್ ಕಾರು ಕಿಝಾಷಿ 8 ಯೂನಿಟ್ ಮಾರಾಟಗೊಂಡಿತ್ತು.


Click it and Unblock the Notifications








