ಭಾರತದಲ್ಲಿ ಹೋಂಡಾ ಸಿಟಿ ಕಾರುಗಳ ಬೃಹತ್ ಹಿಂಪಡೆತ

2005ರಿಂದ 2007ರ ಅವಧಿಯಲ್ಲಿ ಉತ್ಪಾದಿಸಿದ ಎರಡನೇ ತಲೆಮಾರಿನ ಹೋಂಡಾ ಸಿಟಿ ಕಾರುಗಳನ್ನು ಹಿಂಪಡೆಯುವುದಾಗಿ ಹೋಂಡಾ ಸಿಯೆಲ್ಸ್ ಕಾರ್ಸ್ ಇಂಡಿಯಾ ಹೇಳಿದೆ.
"ಹೋಂಡಾ ಜಾಗತಿಕವಾಗಿ ಕಾರುಗಳನ್ನು ಹಿಂಪಡೆಯುತ್ತಿದೆ. ಅದರ ಭಾಗವಾಗಿ ಭಾರತದಲ್ಲೂ ಕಂಪನಿ ಕಾರುಗಳನ್ನು ವಾಪಸ್ ಪಡೆದು ಹೊಸ ಸ್ವಿಚ್ ಹಾಕಿ ಕೊಡಲಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
ಹೊಸ ಸ್ವಿಚ್ ಜೋಡನೆ ಉಚಿತವಾಗಿದ್ದು, ಶೀಘ್ರದಲ್ಲಿ ಸಿಟಿ ಮಾಲಿಕರನ್ನು ಸಂಪರ್ಕಿಸಲಾಗುವುದು ಎಂದು ಕಂಪನಿ ಹೇಳಿದೆ. ಇದೇ ರೀತಿ ಎಚ್ಎಸ್ಸಿಐ ಇಂತದ್ದೇ ಹಿಂಪಡೆತವನ್ನು ಕಳೆದ ಜನವರಿಯಲ್ಲಿ ಮಾಡಿತ್ತು. ಕಂಪನಿಯು 2007ರಲ್ಲಿ ಉತ್ಪಾದಿಸಿದ 8,532 ಸಿಟಿ ಕಾರುಗಳನ್ನು ಹಿಂಪಡೆದಿತ್ತು.
ಕಂಪನಿಯು ಈಗ ಮೂರನೇ ತಲೆಮಾರಿನ ಸಿಟಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕಾರುಗಳನ್ನು ಹಿಂಪಡೆಯಲಾಗುವುದಿಲ್ಲವೆಂದು ಹೋಂಡಾ ಸಿಯೆಲ್ಸ್ ಪ್ರಕಟಣೆಯಲ್ಲಿ ಹೇಳಿದೆ. ಕಂಪನಿ ಹಿಂಪಡೆಯುವುದಿಲ್ಲ.
ಹೋಂಡಾ ಮೋಟರ್ ಕಂಪನಿಯು ಜಾಗತಿಕವಾಗಿ ಒಟ್ಟಾರೆ 9.36 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ. ಇದರಲ್ಲಿ ಹೋಂಡಾ ಜಾಝ್, ಹೋಂಡಾ ಸಿಟಿ, ಸ್ಪೋರ್ಟಿ ಕಾರು ಸಿಆರ್-ವಿ ಸೇರಿದೆ.


Click it and Unblock the Notifications








