ಡೀಸೆಲ್ ದರ ಹೆಚ್ಚಳಕ್ಕೆ ಕಾರು ಕಂಪನಿಗಳ ವಿರೋಧ

Diesel Price Hike
ಡೀಸೆಲ್ ಗೆ ಐಷಾರಾಮಿ ತೆರಿಗೆ ವಿಧಿಸುವ ಸರಕಾರದ ಯೋಜನೆಯನ್ನು ಭಾರತದ ಕಾರು ಕಂಪನಿಗಳು ವಿರೋಧಿಸಿವೆ. ಇಂತಹ ಯಾವುದೇ ತೆರಿಗೆಗಳು ಭಾರತದಲ್ಲಿ ಡೀಸೆಲ್ ಕಾರುಗಳಿಗೆ ಮರಣದಂಡನೆ ವಿಧಿಸಿದ ಹಾಗೇ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.

ಡೀಸೆಲ್ ದರ ಕಡಿಮೆ ಇರುವುದು ಗ್ರಾಹಕರು ಡೀಸೆಲ್ ಕಾರು ಖರೀದಿಸಲು ಪ್ರಮುಖ ಕಾರಣವಾಗಿದೆ. ಇದೇ ಡೀಸೆಲ್ ದುಬಾರಿಯಾದರೆ ಗ್ರಾಹಕರು ಡೀಸೆಲ್ ಕಾರಿನತ್ತ ಕಣ್ಣೇತ್ತಿ ಕೂಡ ನೋಡಲಾರರು ಎನ್ನುವುದು ಕಾರುಕಂಪನಿಗಳ ಆತಂಕವಾಗಿವೆ.

"ಡೀಸೆಲ್ ದರವನ್ನು ಅನಿಯಂತ್ರಿತಗೊಳಿಸುವುದು ಸರಕಾರದ ಮುಂದಿರುವ ಉತ್ತಮ ಆಯ್ಕೆಯಾಗಿದೆ. ದೇಶದ ವಾಹನ ಉದ್ಯಮ ಮಾರಾಟ ಇಳಿಕೆಯಿಂದ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಡೀಸೆಲ್ ತೆರಿಗೆ ವಿಧಿಸುವುದು ಸೂಕ್ತವಲ್ಲ" ಎಂದು ಭಾರತ ವಾಹನ ತಯಾರಿಕಾ ಒಕ್ಕೂಟದ ಅಧ್ಯಕ್ಷ ಪವನ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.

ಸರಕಾರವು ಡೀಸೆಲ್ ಗೆ ಎರಡು ದರ ನೀತಿ ಅಳವಡಿಸಲು ಚಿಂತಿಸಿದೆ. ಆದರೆ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಡೀಸೆಲ್ ದರ ಅನಿಯಂತ್ರಣ ಉತ್ತಮ ಎಂದಿದ್ದಾರೆ.

ಸಾಮಾಜಿಕ ಭಾದ್ಯತೆಯ ಉದ್ದೇಶದಿಂದ ಡೀಸೆಲ್ ಗೆ ಸಬ್ಸಿಡಿ ನೀಡುವುದನ್ನು ಸರಕಾರ ಮುಂದುವರೆಸಬೇಕು ಎಂದು ಭಾರಿ ಉದ್ಯಮಗಳ ಸಚಿವ ಪ್ರಫುಲ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಡೀಸೆಲ್ ಕಾರುಗಳಿಗೆ ಪೆಟ್ರೊಲ್ ಕಾರುಗಳಿಗಿಂತ ಹೆಚ್ಚು ಬೇಡಿಕೆ ಕಾಣುತ್ತಿದೆ. ತಂತ್ರಜ್ಞಾನ ಸಂಬಂಧಿತ ವಿಷ್ಯಗಳಿಂದ ಡೀಸೆಲ್ ಕಾರುಗಳು ಪೆಟ್ರೊಲ್ ಕಾರುಗಳಿಗಿಂತ ಕೊಂಚ ದುಬಾರಿಯಾಗಿವೆ. ಆದರೆ ಇಂಧನ ದಕ್ಷತೆ, ನಿರ್ವಹಣಾ ವೆಚ್ಚ, ಚಾಲನೆ ವೆಚ್ಚ ಕಡಿಮೆಯಾಗಿರುವುದರಿಂದ ಹೆಚ್ಚು ಗ್ರಾಹಕರು ಡೀಸೆಲ್ ಎಂಜಿನ್ ಆಯ್ಕೆಮಾಡಿಕೊಳ್ಳುತ್ತಿದ್ದಾರೆ.

More from DriveSpark

Article Published On: Thursday, September 8, 2011, 13:02 [IST]
English summary
Indian carmakers have opposed the Indian government's plans to impose a luxury tax on diesel. They believe any such tax will kill diesel cars in India. The low diesel cost is the one single reason why Indians buy diesel cars which are more expensive than diesel cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+