ಮುಷ್ಕರಕ್ಕೆ ಮಾರುತಿ ಸೆಡ್ಡು: ಹೊಸ ನೌಕರರ ನೇಮಕಾತಿ

Maruti Suzuki
ಮಾನೆಸರ್ ಘಟಕದಲ್ಲಿ ಮುಷ್ಕರ ನಿರತ ಸಿಬ್ಬಂದಿಗಳ ಮೇಲೆ ಮಾರುತಿ ಸುಜುಕಿ ಕಠಿಣ ನಿಲುವು ಮುಂದುವರೆಸಿದೆ. ಇದೀಗ ಕಂಪನಿ ಸಿಬ್ಬಂದಿಗಳಿಗೆ "ಉತ್ತಮ ನಡತೆ ಅಗ್ರಿಮೆಂಟ್"ಗೆ ಸಹಿಹಾಕಲು ಡೆಡ್ ಲೈನ್ ನೀಡಿದೆ. ಜೊತೆಗೆ ಹೊಸ ಖಾಯಂ ಉದ್ಯೋಗಿಗಳ ನೇಮಕ ಆರಂಭಿಸಲಿದೆ.

"ನಾಳೆ ಅಂದರೆ ಮಂಗಳವಾರದಿಂದ ಕಂಪನಿಯು ಹೊಸ ಖಾಯಂ ಉದ್ಯೋಗಿಗಳ ನೇಮಕಾತಿ ಆರಂಭಿಸಲಿದೆ. ಹೊಸದಾಗಿ ನೇಮಕ ಮಾಡುವ ಸಿಬ್ಬಂದಿಗಳು ನುರಿತರಾಗಿದ್ದು ತಕ್ಷಣ ಉತ್ಪಾದನಾ ವಿಭಾಗಕ್ಕೆ ಸೇರ್ಪಡೆಯಾಗಲಿದ್ದಾರೆ" ಎಂದು ಮಾರುತಿ ಸುಜುಕಿ ವಕ್ತಾರರು ಹೇಳಿದ್ದಾರೆ.

"ಮುಷ್ಕರ ನಿರತ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಂಪನಿ ಯಾವುದೇ ರಾಜಿ ಮಾಡುವುದಿಲ್ಲ. ಇದಕ್ಕಾಗಿ ಇನ್ನಷ್ಟು ಉತ್ಪಾದನೆ ನಷ್ಟ " ಎಂದು ಮಾರುತಿ ಸುಜುಕಿ ಪೋಷಕ ಕಂಪನಿ ಸುಜುಕಿ ಮೋಟರ್ ಚೇರ್ಮನ್ ಒಸಮು ಸುಜುಕಿ ಹೇಳಿದ್ದಾರೆ.

ಆಗಸ್ಟ್ 29ರ ನಂತರ ಮಾರುತಿ ಸುಜುಕಿ ಕಂಪನಿಯು ಹೊಸ ಬಾಂಡ್ ಪೇಪರಿಗೆ ಸಹಿ ಹಾಕದವರನ್ನು ಘಟಕ ಪ್ರವೇಶಿಸಲು ಬಿಟ್ಟಿರಲಿಲ್ಲ. ಉತ್ತಮ ನಡತೆ ಬಾಂಡ್ ಪೇಪರಿಗೆ ಸಹಿ ಹಾಕಿದರೆ ಮಾತ್ರ ಘಟಕ ಪ್ರವೇಶ ಎಂಬ ನಿಯಮವನ್ನು ಕಂಪನಿ ರೂಪಿಸಿತ್ತು. ನೌಕರರ ಪ್ರತಿರೋಧದಿಂದ ಕಂಪನಿಯ ಉತ್ಪಾದನೆಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆಯಾಗಿತ್ತು.

ಮಾನೆಸರ್ ಘಟಕದಲ್ಲಿ ಮಾರುತಿ ನೂತನ ಸ್ವಿಫ್ಟ್, ಎಸ್ಎಕ್ಸ್4 ಮತ್ತು ರಿಟ್ಜ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ. ಹೊಸ ಸ್ವಿಫ್ಟ್ ಗೆ ಅತ್ಯಧಿಕ ಬೇಡಿಕೆಯಿದ್ದು, ನೌಕರರ ಮುಷ್ಕರದಿಂದಾಗಿ ವೇಟಿಂಗ್ ಅವಧಿ ಹೆಚ್ಚಾಗಿದೆ. ಇತ್ತೀಚೆಗೆ ಮಾರುತಿ ಸುಜುಕಿ ಡೀಲರುಗಳು ಹೊಸ ಸ್ವಿಫ್ಟ್ ಗೆ ಬುಕ್ಕಿಂಗ್ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.

ಇತ್ತೀಚಿನ ವರದಿಯೊಂದರ ಪ್ರಕಾರ ಡೀಸೆಲ್ ಆವೃತ್ತಿ ಸ್ವಿಫ್ಟ್ ವೇಟಿಂಗ್ ಅವಧಿ 6 ತಿಂಗಳಿಗಿಂತ ಹೆಚ್ಚಾಗಿದೆ. ಹೊಸ ಆರ್ಡರ್ ತೆಗೆದುಕೊಳ್ಳದಿರುವ ಮೂಲಕ ವೇಟಿಂಗ್ ಅವಧಿ ಕಡಿಮೆ ಮಾಡಲು ನಿರ್ಧರಿಸಿದೆ.

More from DriveSpark

Article Published On: Monday, September 12, 2011, 13:41 [IST]
English summary
Maruti Suzuki India continues its tough stand against striking workers at its Manesar plant. The car maker has stated it would provide workers time till end of Monday to sign the good conduct bond. Later it would start hiring new permanent employees to replace workers who do not sign the bond by Monday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+