ಇ-ಮ್ಯೂಟ್ ಮೈಲೇಜ್ ಹೆಚ್ಚಿಸೋ ಜ್ಯೂಟ್

ಮ್ಯೂಟ್ ಆಕರ್ಷಕ ವಿನ್ಯಾಸ, ಅಲ್ಯುಮಿನಿಯಂ ಮತ್ತು ಕಾರ್ಬನ್ ಫೈಬರ್ ಬಾಡಿ, ಪ್ಲಾಸ್ಟಿಕ್ ಚಾಸೀ ಹೊಂದಿದೆ. ಇರದಿಂದ ಈ ಪುಟ್ಟ ಕಾರಿನ ತೂಕ ಇನ್ನಷ್ಟು ಕಡಿಮೆಯಾಗಿದೆ. ಈ ಕಾರಿನ ತೂಕ ಅರ್ಧ ಕ್ವಿಂಟಾಲ್ ಅಷ್ಟೇ!
ಯಾವ ಕಾರಿನ ಕುರಿತು ಇಷ್ಟೊಂದು ಮಾತನಾಡುತ್ತಿದ್ದಾರೆ? ಯಾವುದೀದು ಮ್ಯೂಟ್ ಕಾರು ಅನ್ನೋ ಗೊಂದಲ ಬೇಡ. ಜರ್ಮನಿ ಮೂಲದ ಟೆಕ್ನಿಕಲ್ ಯುನಿವರ್ಸಿಟಿ ಟಿಯುಎಂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಎಲೆಕ್ಟ್ರಿಕ್ ಕಾರನ್ನು ಅನ್ವೇಷನೆ ಮಾಡಿದ್ದಾರೆ.
"ಕಾರು ಹೆಚ್ಚು ಭಾರವಾಗಿದ್ದರೆ ಹೆಚ್ಚು ಬ್ಯಾಟರಿ ಪವರ್ ಬೇಕಾಗುತ್ತದೆ. ಇದರ ದರವೂ ದುಬಾರಿಯಾಗುತ್ತದೆ. ಆದರೆ ನಾವು ರೂಪಿಸಿರುವ ಕಾರು ಹಗುರ, ಮತ್ತು ಫನ್ ರೀತಿಯಲ್ಲಿ ಸುಲಲಿತವಾಗಿ ಚಾಲನೆ ಮಾಡಲು ನೆರವಾಗುತ್ತದೆ" ಎಂದು ಟಿಯುಎಂ ಎಂಜಿನಿಯರೊಬ್ಬರು ಹೇಳುತ್ತಾರೆ.
ಟಿಯುಎಂ ಎಂಜಿನಿಯರುಗಳು ನೂತನ MUTE ಕಾರನ್ನು ದಕ್ಷತೆ, ಒಟ್ಟಾರೆ ಕಡಿಮೆ ವೆಚ್ಚ ಮತ್ತು ಹೆಚ್ಚು ಸುರಕ್ಷತೆಯ ದೃಷ್ಟಿಕೋನದಿಂದ ಅಭಿವೃದ್ಧಿಪಡಿಸಿದ್ದಾರೆ. ಒಟ್ಟಾರೆ ಎಲೆಕ್ಟ್ರಿಕ್ ಕಾರು ವಿಶ್ಲೇಷಕರು ಮ್ಯೂಟ್ ಕಾರನ್ನು ಭವಿಷ್ಯದ ಆಶಾಕಿರಣ ಎಂದು ಕರೆದಿದ್ದಾರೆ.


Click it and Unblock the Notifications








