ಮಾರುತಿ 800 ಸ್ಥಾನಕ್ಕೆ ಹ್ಯುಂಡೈ 800

ಅದೇ ಸಮಯಕ್ಕೆ ಹ್ಯುಂಡೈ ಕಂಪನಿಯು 800 ಸಿಸಿ ಎಂಜಿನ್ ನ ಹೊಸ ಕಾರೊಂದನ್ನು ಹೊರತರಲಿದೆ. ಹ್ಯುಂಡೈ ಅಧಿಕಾರಿಯೊಬ್ಬರ ಪ್ರಕಾರ ಕಂಪನಿಯ ನೂತನ ಕಾರು ಮಾರುತಿಯಿಂದ ತೆರವಾದ 800ಸಿಸಿ ಸೆಗ್ಮೆಂಟನ್ನು ಆಕ್ರಮಿಸಿಕೊಳ್ಳಲಿದೆಯಂತೆ.
:ಕಂಪನಿಯು ಈ ವರ್ಷದ ಅಂತ್ಯದಲ್ಲಿ ನೂತನ ಸಣ್ಣಕಾರನ್ನು ಹೊರತರಲಿದೆ. ಇದು ಟಾಟಾ ನ್ಯಾನೊ ಮತ್ತು ಮಾರುತಿ ಆಲ್ಟೊ ಕಾರಿನ ನಡುವಿನ ಸೆಗ್ಮೆಂಟ್ ನಲ್ಲಿ ಮಾರಾಟವಾಗಲಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಆರ್ ಸೇತುರಾಮನ್ ಹೇಳಿದ್ದಾರೆ.
ಕಂಪನಿಯು ದೇಶದ ರಸ್ತೆಗೆ ಪೆಟ್ರೊಲ್ ಮತ್ತು ಎಲ್ ಪಿಜಿ ಕಾರುಗಳನ್ನು ಪರಿಚಯಿಸುವುದನ್ನು ಮುಂದುವರೆಸಲಿದೆ. ಡೀಸೆಲ್ ಎಂಜಿನ್ ಹೈಎಂಡ್ ಕಾರಿಗೆ ಮಾತ್ರ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಂಪನಿಯು ಈ ಕಾರಿನ ಮೇಲೆ ಸಾಕಷ್ಟು ಭರವಸೆ ಇಟ್ಟಿದೆ. ಅಂದರೆ ಭಾರತದ ಸಣ್ಣಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಗಳಿಸಲು ಹ್ಯುಂಡೈ 800 ಕಾರು ನೆರವಾಗುವ ನಿರೀಕ್ಷೆಯ ಕಂಪನಿಯದ್ದು. ಇದರ ದರವೂ ಕಡಿಮೆ ಇರುವುದರಿಂದ ಆಲ್ಟೊಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








