ರೆಪೊ ದರ ಹೆಚ್ಚಳ: ವಾಹನೋದ್ಯಮಕ್ಕೆ ಷಾಕ್

"ಈಗಾಗಲೇ ಮಾರುಕಟ್ಟೆ ಹಿನ್ನಡೆ ಅನುಭವಿಸುತ್ತಿದೆ. ರೆಪೊ ದರಗಳನ್ನು ಹೆಚ್ಚಿಸಿರುವುದು ವಾಹನ ಕ್ಷೇತ್ರಕ್ಕೆ ಮತ್ತೊಂದು ಸುತ್ತಿನ ಹೊಡೆತ ನೀಡಲಿದೆ. ಹಬ್ಬದ ಸೀಸನಿನ ವಾಹನ ಬೇಡಿಕೆಗೆ ಇದು ತೀವ್ರತರದ ಪರಿಣಾಮ ಬೀರಲಿದೆ" ಎಂದು ಜನರಲ್ ಮೋಟರ್ಸ್ ಇಂಡಿಯಾ ಉಪಾಧ್ಯಕ್ಷ ಪಿ ಬಾಲೆಂದ್ರನ್ ಹೇಳಿದ್ದಾರೆ.
ಹಣದುಬ್ಬರ ಪ್ರಮಾಣ ಸರಿದೂಗಿಸಲು ಆರ್ ಬಿಐ ರೆಪೊ ದರಗಳನ್ನು ಶೇಕಡ .5ರಷ್ಟು ಹೆಚ್ಚಿಸಿದೆ. ಈಗಾಗಲೇ ಕಾರು ಉದ್ಯಮ ಪೆಟ್ರೊಲ್ ದರದಿಂದ ಕಂಗಲಾಗಿದೆ. ಇತ್ತೀಚೆಗೆ ಪೆಟ್ರೊಲ್ ದರ ಪ್ರತಿಲೀಟರ್ ಗೆ 3.14 ರುಪಾಯಿಯಷ್ಟು ಹೆಚ್ಚಾಗಿತ್ತು.
ದೀಪಾವಳಿ ಹತ್ತಿರದಲ್ಲಿರುವುದರಿಂದ ಹೆಚ್ಚಿನ ಗ್ರಾಹಕರು ವಾಹನ ಖರೀದಿಗೆ ತೊಡಗುತ್ತರೆ. ಸೆಪ್ಟಂಬರ್-ನವೆಂಬರ್ ತಿಂಗಳು ಅತ್ಯಧಿಕ ವಾಹನ ಮಾರಾಟದ ತಿಂಗಳುಗಳೂ ಹೌದು. ಆದರೆ ವಾಹನ ಕಂಪನಿಗಳಿಗೆ ಹೊಡೆತದ ಮೇಲೆ ಹೊಡೆತ ನೀಡುತ್ತಿರುವುದರಿಂದ ಕಂಗಲಾಗಿವೆ.


Click it and Unblock the Notifications








