ಹ್ಯುಂಡೈ ಇಯಾನ್ 800: ಇಲ್ಲಿದೆ ಹೆಚ್ಚಿನ ಮಾಹಿತಿ

ಹ್ಯುಂಡೈ ಇಯಾನ್ ಇಂಧನ ದಕ್ಷತೆ ಪ್ರತಿಲೀಟರ್ ಗೆ 21.1 ಕಿ.ಮಿ. ಇರಲಿದೆ. ಹ್ಯುಂಡೈಗೆ ಈ ಕಾರಿನ ಕುರಿತು ಹೆಚ್ಚಿನ ಭರವಸೆಯೂ ಇದೆ. ಈ ಕಾರಿಗೆ ಪ್ರತಿಸ್ಪರ್ಧಿ ಕಾರುಗಳು ಯಾವುದು ಇಲ್ಲ. ಹೀಗಾಗಿ ಇದಕ್ಕೆ ಯಾವುದೇ ಎದುರಾಳಿಗಳಿಲ್ಲವೆಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಇದು ಕಂಪನಿಯ ಎಂಟ್ರಿ ಲೆವೆಲ್ ಕಾರು. ಹೀಗಾಗಿ ಅತ್ಯುತ್ತಮ ದಕ್ಷತೆ, ಫೀಚರ್ಸ್ ನಿರೀಕ್ಷಿಸಬಹುದು" ಎಂದು ಅವರು ಹೇಳುತ್ತಾರೆ. ಸ್ಯಾಂಟ್ರೊ ಮಾರಾಟಕ್ಕೆ ಹ್ಯುಂಡೈ ಇಯಾನ್ ನಿಂದ ಯಾವುದೇ ಹಿನ್ನಡೆಯಾಗದು ಎಂಬ ಭರವಸೆಯೂ ಕಂಪನಿಗಿದೆ. ಸ್ಯಾಂಟ್ರೊ ದರ ಸುಮಾರು 2.8 ಲಕ್ಷ ರು. ಇದೆ.
ಕಂಪನಿಯು ಈ ಕಾರಿನ ಮೇಲೆ ಸಾಕಷ್ಟು ಭರವಸೆ ಇಟ್ಟಿದೆ. ಅಂದರೆ ಭಾರತದ ಸಣ್ಣಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಗಳಿಸಲು ಹ್ಯುಂಡೈ 800 ಕಾರು ನೆರವಾಗುವ ನಿರೀಕ್ಷೆಯ ಕಂಪನಿಯದ್ದು. ಇದರ ದರವೂ ಕಡಿಮೆ ಇರುವುದರಿಂದ ಆಲ್ಟೊಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








