ಭಾರತದಲ್ಲಿ ಅಸುರಕ್ಷಿತ ಕಾರುಗಳ ಮೇಲೆ ಹದ್ದಿನ ಕಣ್ಣು!!

India To Set Up Agency To Recall Unsafe Cars
ಭಾರತ ಸರಕಾರವು ರಸ್ತೆ ಸುರಕ್ಷಿತ ಏಜೆನ್ಸಿಯೊಂದನ್ನು ಸ್ಥಾಪಿಸುವ ಕುರಿತು ಆಲೋಚಿಸುತ್ತಿದೆ. ಅಂದರೆ ಅಮೆರಿಕದಲ್ಲಿರುವ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ರೀತಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಆಟೋಮೋಟಿವ್ ಬೋರ್ಡ್ ನಿರ್ಮಿಸುವ ಕುರಿತು ಸರಕಾರ ಚಿಂತಿಸಿದೆ.

ಅಮೆರಿಕದಲ್ಲಿ ಸೀಟು ಬೆಲ್ಟ್, ಬ್ಯಾಟರಿ ಪಿನ್, ಡೋರ್ ಲಾಕ್, ಹೀಗೆ ವಾಹನಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಕಂಡರೂ ವಾಹನಗಳನ್ನು ಹಿಂಪಡೆಯಲಾಗುತ್ತದೆ. ಭಾರತದಲ್ಲಿ ಇನ್ನು ಮುಂದೆ ಇಂತಹ ರಾಷ್ಟ್ರೀಯ ವಾಹನ ನಿಗಾ ಏಜೆನ್ಸಿ ಸ್ಥಾಪಿಸಿದರೆ ವಾಹನ ಕಂಪನಿಗಳು ವಾಹನದಲ್ಲಿನ ಸಣ್ಣಪುಟ್ಟ ಸಮಸ್ಯೆಗಳಿಗೂ ಉತ್ತರಿಸಬೇಕಾಗುತ್ತದೆ.

"ವಾಹನಗಳ ಸುರಕ್ಷತೆಯ ಮೇಲೆ ನಿಗಾ ಇಡುವಂತಹ ಏಜೆನ್ಸಿ ಆರಂಭಿಸುವ ಕುರಿತು ಪರಿಶೀಲಿಸುತ್ತಿದ್ದೇವೆ. ದೇಶದ ವಾಹನೋದ್ಯಮ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ವಾಹನ ಮಾರುಕಟ್ಟೆ ಪಾಲು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಇಂತಹ ಸಮಯದಲ್ಲಿ ನಿಗಾ ಏಜೆನ್ಸಿ ಅತ್ಯಂತ ಅಗತ್ಯ" ಎಂದು ಭಾರಿ ಉದ್ಯಮಗಳ ಸಹಾಯಕ ಕಾರ್ಯದರ್ಶಿ ಅಂಬುಜ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ವಾಹನಗಳ ಹಿಂಪಡೆತ ನೀತಿ ಇಲ್ಲ. ಹತ್ತಾರೂ ನ್ಯಾನೊ ಬೆಂಕಿಗಾಹುತಿಯಾದರೂ, ಎಂಜಿನ್ ಸಮಸ್ಯೆ ಕಂಡರೂ ವಾಹನಗಳನ್ನು ಹಿಂಪಡೆಯುವ ಸಂಪ್ರದಾಯ ಬಲು ಕಡಿಮೆ. ಅವೆಲ್ಲ ಕಂಪನಿಗಳ ಮರ್ಜಿಗೆ ಬಿಟ್ಟ ವಿಷಯ. ಮಾರುತಿ ಸುಜುಕಿ ಎಂಜಿನ್ ಸಮಸ್ಯೆ ಹಿನ್ನಲೆಯಲ್ಲಿ ಇತ್ತೀಚೆಗೆ ಕೆಲವು ಡೀಸೆಲ್ ಕಾರು ಹಿಂಪಡೆದಿತ್ತು. ಹೋಂಡಾ ಸಿಯೆಲ್ ಕೂಡ ಸಿಟಿ ಸೆಡಾನ್ ಕಾರುಗಳನ್ನು ಹಿಂಪಡೆದಿತ್ತು.

ನ್ಯಾಷನಲ್ ಆಟೋಮೊಟಿವ್ ಬೋರ್ಡ್ ಅಂದ್ರೆ ವಾಹನಗಳ ನಿಗಾ ಘಟಕ. ಈ ಏಜೆನ್ಸಿಯು ಅಪಘಾತವಾದ ವಾಹನಗಳನ್ನು ಪರಿಶೀಲಿಸುತ್ತದೆ. ಗ್ರಾಹಕರ ದೂರುಗಳನ್ನು ಅವಲೋಕಿಸುತ್ತದೆ. ವಾಹನಗಳು ಸುರಕ್ಷಿತವಲ್ಲ ಅನಿಸಿದರೆ ಹಿಂಪಡೆದುಕೊಳ್ಳುವಂತೆ ಕಾರು ಕಂಪನಿಗಳಿಗೆ ಆದೇಶಿಸುತ್ತದೆ. ಈ ಏಜೆನ್ಸಿಯು ಸುರಕ್ಷತಾ ನೀತಿ ನಿಯಮಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಸುರಕ್ಷತಾ ಫೀಚರುಗಳಿಗೆ ರೇಟಿಂಗ್ ನೀಡುತ್ತದೆ.

More from DriveSpark

Article Published On: Friday, September 23, 2011, 14:40 [IST]
English summary
The Indian government is planning to set up National Automotive Board, a road safety agency in line with the US National Highway Traffic Safety Administration. A senior government official has indicated that the Indian safety agency will have the power to recall cars that suffer from defects and safety issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+