ಬಿಎಂಡಬ್ಲ್ಯು ಮಿನಿ ಪುಟ್ಟ ಕಾರು: ದರ ಎಷ್ಟು ಗುರು?

ದೇಶದ ರಸ್ತೆಗೆ ಮಿನಿ ಕೂಪರ್, ಕಂಟ್ರಿಮೆನ್, ಕ್ಲಬ್ ಮ್ಯಾಂಡ್ ಮತ್ತು ಕ್ಯಾಬಿರೊ ಕಾರುಗಳನ್ನು ಪರಿಚಯಿಸಲು ಬಿಎಂಡಬ್ಲ್ಯು ನಿರ್ಧರಿಸಿದೆ. ಇದು ಪುಟ್ಟ ಕಾರಾದರೂ ದುಬಾರಿ ಕಾರುಗಳು. ಇದರಲ್ಲಿ ಕೂಪರ್ ದರ ಕೊಂಚ ಅಗ್ಗ. ಅಂದರೆ ಸುಮಾರು 25 ಲಕ್ಷ ರುಪಾಯಿ!! ಕ್ಲಬ್ ಮೆನ್ ಕಾರು ದರ ಸುಮಾರು 33 ಲಕ್ಷ ರು.
ಮಿನಿ ಶೀಘ್ರದಲ್ಲಿ ದೇಶದ ಪ್ರೀಮಿಯಂ ಸಣ್ಣಕಾರುಗಳಾದ ಫೋಕ್ಸ್ ವ್ಯಾಗನ್ ಬೀಟಲ್ ಮತ್ತು ಫಿಯೆಟ್ 500 ಜೊತೆ ಸೇರಲಿದೆ. ಆದರೆ ಬೀಟಲ್ ಮತ್ತು ಫಿಯೆಟ್ 500 ದೇಶದ ರಸ್ತೆಯಲ್ಲಿ ಹೆಚ್ಚು ಗೆಲುವು ಪಡೆದಿಲ್ಲ ಅನ್ನೋದು ಕೂಡ ನಿಚ್ಚಳ ಸತ್ಯ. ಅಂದ್ರೆ ಕೇವಲ 620 ಬೀಟಲ್ ಕಾರು ಮಾರಾಟವಾಗಿದೆ. ಫಿಯೆಟ್ ಸಣ್ಣಕಾರು ಕೇವಲ 100 ಯುನಿಟ್ ಮಾರಾಟವಾಗಿದೆ. ಮಿನಿ ಅದೃಷ್ಟ ಹೇಗಿದೆಯೋ ಕಾದು ನೋಡೋಣ..


Click it and Unblock the Notifications








