ದೀಪಾವಳಿ ಹಣತೆ ಹಚ್ಚಲು ಸುರು ಮಾಡಿದ ಹೋಂಡಾ

ಇದರಲ್ಲಿ ಲಿನಿಯಾ ಕಾರಿಗೆ ಒಂದು ಲಕ್ಷ ರು.ಗಿಂತ ಹೆಚ್ಚು ಡಿಸ್ಕೌಂಟಿದೆ. ಲಿನಿಯಾ ಕಾರು ಸುಮಾರು 70 ಸಾವಿರ ರು. ಕಡಿಮೆ ದರಕ್ಕೆ ದೊರಕಲಿದೆ. ಇದೀಗ ಇತರ ಕಂಪನಿಗಳೂ ದೀಪಾವಳಿ ಆಫರ್ ಪ್ರಕಟಿಸಲು ಸುರು ಮಾಡಿವೆ. ಆದರೆ ಹೆಚ್ಚಿನ ಕಂಪನಿಗಳು ದುಬಾರಿ ಪೆಟ್ರೊಲ್ ದರದಲ್ಲಿ ದೀಪಾವಳಿ ಹಣತೆ ಹಚ್ಚಲು ಹಿಂಜರಿಯುತ್ತಿವೆ.
ಹೋಂಡಾ ಕಂಪನಿ ಕೂಡ ದೀಪಾವಳಿ ಆಫರ್ ನೀಡಲು ಮುಂದಾಗಿದೆ. ಆದರೆ ಕಂಪನಿ ಯಾವುದೇ ದರ ವಿನಾಯಿತಿ ಮಾಡಿಲ್ಲ. ಹೋಂಡಾ ಅಕಾರ್ಡ್ ಮತ್ತು ಸಿವಿಕ್ ಸೆಡಾನ್ ಕಾರುಗಳಿಗೆ ಆಡಿಯೋ ವಿಶುಯಲ್ ನ್ಯಾವಿಗೇಷನ್ ಸಿಸ್ಟಮ್(ಎವಿಎನ್) ಅಳವಡಿಸಿಕೊಡಲಿದೆ. ಇದು ನೂತನ ಗ್ರಾಹಕರಿಗೆ ದೀಪಾವಳಿ ಕೊಡುಗೆಯಂತೆ!
ಅಕಾರ್ಡ್ ಮತ್ತು ಸಿವಿಕ್ ನೂತನ ಎವಿಎನ್ ಸಿಸ್ಟಮ್ ಫುಲ್ ಟಚ್ ಸ್ಕ್ರೀನ್ ಆಗಿದ್ದು, ನ್ಯಾವಿಗೇಷನ್ ಸಿಸ್ಟಮ್, ಡಿವಿಡಿ ಪ್ಲೇಯರ್, ಬ್ಲೂಟೂಥ್, ರಿಯರ್ ಪಾರ್ಕಿಂಗ್ ಕ್ಯಾಮರಾ, ಐಪ್ಯಾಡ್ ನೊಂದಿಗೆ ಯುಎಸ್ ಬಿ ಪೋರ್ಟ್ ಮತ್ತು ರೇಡಿಯೋ ಟ್ಯೂನರ್ ನೊಂದಿಗೆ ಎಂಪಿ3 ಸಪೋರ್ಟ್ ಇತ್ಯಾದಿ ಫೀಚರುಗಳಿವೆ.
ಇಷ್ಟೇ ಅಲ್ಲ ಹೋಂಡಾ ಸಿಯೆಲ್ ಇಂಡಿಯಾ ಕಂಪನಿಯು ಕೇವಲ ಒಂದು ರುಪಾಯಿಗೆ ಒಂದು ವರ್ಷದ ವಿಮೆಯನ್ನು ನೀಡುತ್ತಿದೆ. ಈ ಬಾರಿ ಕಾರಿನ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಆಕರ್ಷಕ ಫೀಚರುಗಳೊಂದಿಗೆ ಗ್ರಾಹಕರ ಕೈಗೆ ಹೋಂಡಾ ಸಿವಿಕ್ ಮತ್ತು ಅಕಾರ್ಡ್ ಕಾರನ್ನು ನೀಡಲಿದೆ.


Click it and Unblock the Notifications








