ಕಾರು ಸವಾರಿ ಪ್ರಪ್ರಥಮ ಕನ್ನಡ ಪುಸ್ತಕ ಅನಾವರಣ

ವಾಹನ ಚಾಲನೆ, ನಿರ್ವಹಣೆ ಮಾಹಿತಿಗಳು ಇಂಗ್ಲಿಷ್ ನಲ್ಲಿ ದೊರಕುತ್ತವೆ. ಅದರಲ್ಲಿರುವ ವಾಹನ ಭಾಷೆ ಸುಲಭದಲ್ಲಿ ಅರ್ಥವಾಗುವಂತದ್ದೂ ಅಲ್ಲ. ಕಾರು ಸವಾರಿ ಮಾಹಿತಿ ಕಸ್ತೂರಿ ಕನ್ನಡದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೇ?

ಕನ್ನಡ ಭಾಷೆಯಲ್ಲಿರುವ "ಕಾರು ಚಾಲನೆ ಮತ್ತು ನಿರ್ವಹಣೆ" ಪುಸ್ತಕ ಉಡುಪಿ ಸಮೀಪದ ಶಿರ್ವದಲ್ಲಿ ಬಿಡುಗಡೆಯಾಗಿದೆ. "ಕಾರು ಡ್ರೈವಿಂಗ್ ಮತ್ತು ನಿರ್ವಹಣೆ" ಎಂಬ ಹೆಸರಿನ ಪುಸ್ತಕ ಬರೆದವರು ಎನ್ ಭವಾನಿಶಂಕರ್. ಅವರು ಸೈಂಟ್ ಮೇರಿಸ್ ಕಾಲೇಜಿನ ಕನ್ನಡ ಉಪನ್ಯಾಸಕ.

ಈ ಪುಸ್ತಕವನ್ನು ಬಜ್ಪೆ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಮೆಕಾನಿಕಲ್ ಡಿಪಾರ್ಟ್ ಮೆಂಟ್ ಉಪನ್ಯಾಸಕ ದಿವಕರ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ವಾಹನ ಹೊಂದಿರುವ ಕನ್ನಡಿಗರಿಗೆ ಇದು ಅತ್ಯಗತ್ಯವಾದ ಪುಸ್ತಕವಾಗಿದೆ ಅನ್ನೋದು ದಿವಕರ್ ಅಭಿಪ್ರಾಯ. ಕಾರು ಚಾಲನೆ ಮತ್ತು ನಿರ್ವಹಣೆ ಕುರಿತಾಗಿ ಕನ್ನಡದಲ್ಲಿ ಇದು ಪ್ರಪ್ರಥಮ ಪುಸ್ತಿಕೆಯಾಗಿದೆ.

ಪುಸ್ತಕದಲ್ಲಿ ಏನಿದೆ: ಕಾರು ಚಾಲನೆ ತರಬೇತಿ, ಕಾರಿನ ಬಿಡಿಭಾಗಗಳ ಮಾಹಿತಿ, ಬಿಡಿಭಾಗಗಳ ಕಾರ್ಯನಿರ್ವಹಣೆ, ಕಾರಿನ ಯಾವ ಭಾಗಗಳನ್ನೆಲ್ಲ ನಿಯಮಿತವಾಗಿ ಮೇಟೆಂನ್ ಮಾಡುತ್ತಿರಬೇಕು ಮುಂತಾದ ಮಾಹಿತಿಗಳಿವೆ.

ಇಷ್ಟೇ ಅಲ್ಲದೇ ಟ್ರಾಫಿಕ್ ಸಿಗ್ನಲ್, ಚಾಲನೆ ಪರೀಕ್ಷೆ, ಸುರಕ್ಷಿತ ಚಾಲನೆ ಇತ್ಯಾದಿ ಮಾಹಿತಿಗಳಿವೆ. ಸುಮಾರು 300 ಚಿತ್ರಗಳು ಈ ಪುಸ್ತಕದ ಪ್ರತಿಪುಟವನ್ನು ಆಕರ್ಷಕವಾಗಿಸಿದೆ.

More from DriveSpark

Article Published On: Monday, September 26, 2011, 11:48 [IST]
English summary
First Kannada book about Car Driving and Maintenance released in near Udupi. This Book written by St. Mary's English School Kannada Lecturer N. Bhavanishankar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+