ವಿಶ್ವದ ಪುರಾತನ ಉಗಿಕಾರು ಹರಾಜಿಗಿದೆ!!

1884 de Dion Bouton et Trepardoux Dos-a-Dos Steam Runabout
ವಿಶ್ವದ ಪುರಾತನ ಕಾರೊಂದು ಲಂಡನ್ ಹರಾಜು ಮಾರುಕಟ್ಟೆಯಲ್ಲಿದೆ. ನಿಮಗೂ ಹಳೆಯ ಕಾರು ಸಂಗ್ರಹಿಸುವ ಹವ್ಯಾಸವಿದ್ದರೆ, ಸುಮಾರು 20 ಲಕ್ಷ ಡಾಲರ್ ವಿನಿಯೋಗಿಸಲು ಸಿದ್ಧರಿದ್ದರೆ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಇದು ವಿಶ್ವದ ಅತ್ಯಂತ ಹಳೆಯ ಕಾರು. ಈಗಲೂ ಉತ್ತಮ ಕಂಡಿಷನ್ ನಲ್ಲಿದೆ.

1884ರಲ್ಲಿ ನಿರ್ಮಿಸಿದ ಈ ಕಾರಿನ ಹೆಸರು ತುಂಬಾ ಉದ್ದವಿದೆ. ಶಾರ್ಟ್ ಆಗಿ ದೆ ದಿಯಾನ್ ತ್ರಿಸೈಕಲ್ಸ್ ಅಂತ ಕರೆಯಲಾಗುತ್ತಿದೆ. ಇದು ಫೋರ್ಥ್ ಹ್ಯಾಂಡ್ ಕಾರು. ಯಾಕೆಂದರೆ ಕಳೆದ 127 ವರ್ಷಗಳಲ್ಲಿ ಇದು ಕೇವಲ ನಾಲ್ಕು ಮಾಲಿಕರನ್ನು ಮಾತ್ರ ಹೊಂದಿತ್ತು. ಕಳೆದ 81 ವರ್ಷದಿಂದ ಈ ಕಾರು ಲಂಡನಿನ ವ್ಯಕ್ತಿಯೊಬ್ಬರ ಬಳಿಯಿದೆ.

ಅಚ್ಚರಿಯೆಂದರೆ ಇದು ಉಗಿಕಾರು. ಅಂದ್ರೆ ಇದರ ಟ್ಯಾಂಕಿರಿಗೆ ನೀರು ತುಂಬಿಸಿದರೆ ಸಾಕು. ಪ್ರತಿಟ್ಯಾಂಕ್ ನೀರಿಗೆ 20 ಮೈಲು ಸಾಗುತ್ತದೆ. ಗಂಟೆಗೆ ಸುಮಾರು 38 ಮೈಲು ವೇಗ ಹೊಂದಿದೆ.

ಇದು ವಿಶ್ವದ ಮೊದಲ ಆಟೋ ರೇಸ್ ನಲ್ಲಿ ಪಾಲ್ಗೊಂಡಿತ್ತು. ಪೆಡಲ್ ಬೀಚ್ ಕಾರ್ಯಕ್ರಮದಲ್ಲಿ ಈ ಕಾರಿಗೆ 1997ರಲ್ಲಿ ಎರಡು ಬಹುಮಾನ ಬಂದಿತ್ತಂತೆ. ಈಗ ಈ ಮಾಡೆಲ್ ಟ್ರೈಸಿಕಲ್ ಕೇವಲ 6 ಮಾತ್ರ ಇದೆ. ಅದರಲ್ಲಿ ಈ ವಾಹನ ಮಾತ್ರ ಇನ್ನೂ ರನ್ನಿಂಗ್ ಕಂಡಿಷನ್ ಉಳಿಸಿಕೊಂಡಿದೆ. ಈ ವಾಹನ ಸುಮಾರು 20-25 ಲಕ್ಷ ಡಾಲರಿಗೆ ಹರಾಜಾಗುವ ನಿರೀಕ್ಷೆಯಿದೆ.

More from DriveSpark

Article Published On: Monday, September 26, 2011, 16:51 [IST]
English summary
The world's oldest running car up for auction. It's the world's oldest running motor car, a historic 1884 de Dion Bouton et Trepardoux Dos-a-Dos Steam Runabout.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+