ಪಾರ್ಕಿಂಗ್ ವಿಷ್ಯದಲ್ಲಿ ಪುರುಷ ಮೇಲು, ಮಹಿಳೆ ಫೇಲು
ಬ್ರಿಟನಿನ ಡ್ರೈವಿಂಗ್ ಸ್ಟಾಂಡರ್ಡ್ ಏಜೆನ್ಸಿ ಈ ಅಂಕಿಅಂಶ ಪ್ರಕಟಿಸಿದೆ. ಏಜೆನ್ಸಿ ಕಳೆದ ವರ್ಷ ನಡೆಸಿದ ಚಾಲನೆ ಪರೀಕ್ಷೆಯಲ್ಲಿ ಮೂರರಲ್ಲಿ ಓರ್ವ ಮಹಿಳೆಗೆ ಸರಿಯಾಗಿ ಪಾರ್ಕಿಂಗ್ ಮಾಡುವುದೇ ಸಾಧ್ಯವಾಗಿಲ್ಲವಂತೆ.
ಈ ಏಜೆನ್ಸಿಯು ನಡೆಸಿದ ಚಾಲನೆ ಪರೀಕ್ಷೆಯಲ್ಲಿ ವಿವಿಧ ತಪ್ಪುಗಳಿಂದ 1.70 ಲಕ್ಷ ಮಹಿಳೆಯರು ಪಾಸಾಗಿಲ್ಲ. ಇದರಲ್ಲಿ 55 ಸಾವಿರ ಮಹಿಳೆಯರು ಪಾರ್ಕಿಂಗ್ ಮಾಡುವಾಗ ಫೇಲಾಗಿದ್ದಾರೆ ಎಂದು ಡೈಲಿ ಮೈಲ್ ವರದಿ ಮಾಡಿದೆ.
ಏನ್ರಿ ಇದು ಅನ್ಯಾಯ!! ಯಾವುದೋ ಒಂದು ಸಮೀಕ್ಷೆ ತೋರಿಸಿ ಇಡೀ ಮಹಿಳಾ ಸಾಮ್ರಾಜ್ಯಕ್ಕೆ ಅವಮಾನ ಮಾಡುತ್ತಿರಲ್ವ ಅಂತ ಸಿಟ್ಟಾಗಬೇಡಿ.
ಜರ್ಮನಿಯ ರಾರ್ ಯುನಿವರ್ಸಿಟಿ ಸಂಶೋಧಕರು ಹಲವು ಪುರುಷರು ಮತ್ತು ಮಹಿಳೆಯರಲ್ಲಿ ಆಡಿ ಕಾರನ್ನು ಪಾರ್ಕಿಂಗ್ ಮಾಡಲು ಹೇಳಿದ್ದರು. ಇಲ್ಲೂ ಪುರುಷರು ಮೇಲುಗೈ ಸಾಧಿಸಿದ್ದಾರೆ. ಇಲ್ಲಿ ಪುರುಷರಿಗಿಂತ ಮಹಿಳೆಯರು ಸರಾಸರಿ 20 ಸೆಕೆಂಡ್ ಪಾರ್ಕಿಂಗ್ ಮಾಡುವಲ್ಲಿ ವಿಳಂಬ ಮಾಡಿದ್ದಾರಂತೆ.
ಮಿಚಿಗನ್ ಯುನಿವರ್ಸಿಟಿಯಲ್ಲೂ ಇಂತದ್ದೇ ಸಂಶೋಧನೆ ನಡೆದಿದೆ. ಈ ಸಂಶೋಧನೆಯ ಪ್ರಕಾರ ಮಹಿಳೆಯರು ಕಡಿಮೆ ಪ್ರಯಾಣದಲ್ಲಿ ಹೆಚ್ಚು ಅಪಘಾತ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅಡ್ಡರಸ್ತೆಗಳಲ್ಲಿ, ಗಲ್ಲಿರಸ್ತೆಗಳಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ ಮಹಿಳೆಯರು ಹೆಚ್ಚು ಅಪಘಾತ ಮಾಡುತ್ತಾರಂತೆ ಎಂದು ಇಲ್ಲಿನ ಸಂಶೋಧಕರು ಕಂಡುಕೊಂಡಿದ್ದಾರೆ.
ಬ್ರಿಟನಿನ ಇನ್ನೊಂದು ಸಂಶೋಧನೆ ಕೂಡ ಮಹಿಳೆಯರಿಗೆ ಕೂಡ ಮಹಿಳೆಯರ ವಿರುದ್ಧವಿದೆ. ಮಹಿಳೆಯರಿಗೆ ಹೋಲಿಸಿದರೆ ವಾಹನ ಚಾಲನೆಯಲ್ಲಿ ಪುರುಷರು ವಾಹನ ಚಾಲನೆಯಲ್ಲಿ ಹೆಚ್ಚು ಚಾಲಕಿತನ ತೋರಿಸುತ್ತಾರಂತೆ. ಪುರುಷರು ಯಾವುದೇ ಕಠಿಣ ರಸ್ತೆಗಳಲ್ಲೂ ಸಲಿಸಾಗಿ ಕಾರು ಚಲಾಯಿಸುತ್ತಾರೆ ಎಂದು ಈ ಸಂಶೋಧನೆ ಹೇಳಿದೆ.
ಕಳೆದ ವರ್ಷ ಬ್ರಿಟನಿನಲ್ಲಿ ಸುಮಾರು 15 ಲಕ್ಷ ಜನರು ಡ್ರೈವಿಂಗ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಶೇಕಡ 50.7ರಷ್ಟು ಪುರುಷರು ಮತ್ತು ಶೇಕಡ 44.1 ಮಹಿಳೆಯರು ಮಾತ್ರ ಪಾಸಾಗಿದ್ದಾರಂತೆ.


Click it and Unblock the Notifications









