ದೇಶಕ್ಕೆ ಬಂತು ಟಾಮ್ ಟಾಮ್ ಜಿಪಿಎಸ್ ಸಿಸ್ಟಮ್

TomTom automobile navigation system
ಟಾಮ್ ಟಾಮ್ ಅಂದ್ರೆ ನೆದರ್ ಲ್ಯಾಂಡಿನ ವಾಹನ ನ್ಯಾವಿಗೇಷನ್ ಸಿಸ್ಟಮ್ ತಯಾರಿಕಾ ಕಂಪನಿಯಾಗಿದೆ. ಇದೀಗ ಟಾಮ್ ಟಾಮ್ ಭಾರತದಲ್ಲಿ ಮೂರು ಸಾತ್ನವ್ ಸಿಸ್ಟಮ್ ಹೊರತರುವುದಾಗಿ ಪ್ರಕಟಿಸಿದೆ. ವಯಾ 100, ವಯಾ 120 ಮತ್ತು ವಯಾ 125 ಎಂಬ ಸಾತ್ನವ್ ಸಿಸ್ಟಮ್ ಹೊರತರಲಿದೆ. ಇದು ವಾಹನಗಳಲ್ಲಿ ದಾರಿತೋರಿಸೋ ಜಿಪಿಎಸ್ ಸಿಸ್ಟಮ್ ಗಳಾಗಿವೆ.

ಈ ಮೂರು ಜಿಪಿಎಸ್ ಸಾಧನಗಳು ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆಯಾಗಲಿದೆ. ಇದರ ದರ ಸುಮಾರು 15 ಸಾವಿರ ರು. ಇರುವ ನಿರೀಕ್ಷೆಯಿದೆ. ರಿಲಯೆನ್ಸ್ ಡಿಜಿಟಲ್ ಕಾರ್ನೇಷನ್ ಮತ್ತು ರಿಲಯೆನ್ಸ್ ಆಟೋಝೋನ್ ರಿಟೇಲ್ ಸರಪಣಿ ಮೂಲಕ ಈ ಸಾಧನಗಳನ್ನು ಕಂಪನಿ ಮಾರಾಟ ಮಾಡಲಿದೆ.

ಟಾಮ್ ಟಾಮ್ ಕಂಪನಿಯ ಸಾತ್ನವ್ ಸಿಸ್ಟಮ್ ದೇಶದ 5 ಸಾವಿರ ಪಟ್ಟಣ(ನಗರ ಸೇರಿದಂತೆ)ಗಳಲ್ಲಿ ಮತ್ತು 11 ಸ್ಥಳೀಯ ಭಾಷೆಗಳಲ್ಲಿ ಧ್ವನಿಸೇವೆ ಆಧರಿತವಾಗಿ ದಾರಿ ತೋರಿಸಲಿದೆ. ಇದು ಒಂದು ರೀತಿಯ ಮ್ಯಾಪ್ ಸರ್ವಿಸ್ ಕೂಡ ಹೌದು. ಅಂದರೆ ಕಾರು ಚಲಿಸುತ್ತಿರುವಾಗ ದಾರಿ ಕುರಿತು ಗೊಂದಲವಾದರೆ ಇದನ್ನು ನೋಡಿದರೆ ಸಾಕು. ಇದು ಸ್ಥಳೀಯ ವಿಶೇಷತೆಗಳನ್ನು ಕೂಡ ನೀಡುತ್ತದೆ.

ಟಾಮ್ ಟಾಮ್ ಕಂಪನಿಯು ಇದನ್ನು ಅಳವಡಿಸಿಕೊಳ್ಳುವಂತೆ ಕಾರುಕಂಪನಿಗಳಲ್ಲೂ ಮಾತುಕತೆ ನಡೆಸುತ್ತಿದೆ. ಸದ್ಯ ಟಾಮ್ ಟಾಮ್ ಪ್ರಧಾನ ಕಚೇರಿ ಪುಣೆಯಲ್ಲಿದೆ. ಕಂಪನಿಯು ಕಳೆದ ಹತ್ತು ವರ್ಷಗಳಿಂದ ದೇಶಕ್ಕಾಗಿ ವಿಶೇಷ ಮ್ಯಾಪ್ ಅಭಿವೃದ್ಧಿಪಡಿಸುತ್ತಿದೆ. ಕಂಪನಿಯ ಈ ಅನುಭವ ಟಾಮ್ ಟಾಮ್ ಗ್ರಾಹಕರಿಗೆ ವಿಶೇಷ ಪ್ರಯಾಣದ ಅನುಭವ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Wednesday, September 28, 2011, 15:09 [IST]
English summary
Tom Tom the Netherlands based automobile navigation system manufacturer unveiled three satnav systems for India and announced its entry in to the Indian market. The satnav systems to be sold here will be VIA 100, VIA 120 and VIA 125 for India. These satnav systems will be available from October and are expected to cost over Rs.15,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+