ಗಾಳಿ ಮೂಲಕ ಚಲಿಸೋ ಟಾಟಾ ಪವನಕಾರ್!!

ವೈನ್ ಮೂಲಕ ಚಲಿಸೋ ಕಾರಿನ ಕುರಿತು ಕೇಳಿದ್ದೀರಿ. ಗಾಳಿ, ವಾಯು, ಮಾರುತ ಹೀಗೆ ಬಹುನಾಮದಿಂದ ಕರೆಯುವ ಪವನಶಕ್ತಿಯಿಂದ ಚಲಿಸೋ ಕಾರನ್ನು ಟಾಟಾ ಮೋಟರ್ಸ್ ಅಭಿವೃದ್ಧಿಪಡಿಸುತ್ತಿದೆ. ಸಂಕುಚಿತ ಗಾಳಿ ಮೂಲಕ ಚಲಿಸೋ ಈ ಕಾರಿನ ಹೆಸರು ಮಿನಿಕಾಟ್.
ಸಂಕುಚಿತ ಪವನಶಕ್ತಿಯಿಂದ ಚಲಿಸೋ ಈ ಕಾರು ಮೊದಲ ವಾಣಿಜ್ಯ ಕಾರು ಕೂಡ ಹೌದು. ಇತ್ತೀಚೆಗೆ ಬೆಂಗಳೂರಿನ ವಿದ್ಯಾರ್ಥಿಗಳು ಸಂಕುಚಿತ ಗಾಳಿಯಿಂದ ಚಲಿಸೋ ಬೈಕ್ ಅಭಿವೃದ್ಧಿಪಡಿಸಿದ್ದರು. ಟಾಟಾ ಮಿನಿಕಾಟದ ದರ ಸುಮಾರು 8,177 ಡಾಲರ್ ಅಥವಾ ಸುಮಾರು 4 ಲಕ್ಷ ರು. ಇರಲಿದೆ ಎಂದು ವರದಿಗಳು ಹೇಳಿವೆ.
ಈ ಕಾರನ್ನು ಫಾರ್ಮುಲಾ ಒನ್ ಎಂಜಿನಿಯರ್ Guy Nigre ವಿನ್ಯಾಸಮಾಡಿದ್ದಾರೆ. ಶೀಘ್ರದಲ್ಲಿ ಟಾಟಾ ಮೋಟರ್ಸ್ ದೇಶದಲ್ಲಿ ಸುಮಾರು 6 ಸಾವಿರ ಇಂತಹ ಕಾರುಗಳನ್ನು ಹೊರತರಲಿದೆ ಎಂದು ವರದಿಗಳು ಹೇಳಿವೆ. ಈ ಪವನಕಾರಿನ ಗಾಳಿಸಿಲಿಂಡರ್ ಒಮ್ಮೆ ಪೂರ್ತಿ ಫಿಲ್ ಮಾಡಿದರೆ ಸುಮಾರು 300 ಕಿಲೋಮೀಟರ್ ಸಾಗಬಹುದಂತೆ. ಇದಕ್ಕೆ ತಗುಲುವ ವೆಚ್ಚ ಕೇವಲ 2 ಡಾಲರ್. ಅಂದರೆ ಸುಮಾರು 100 ರುಪಾಯಿ.
ಇದು ಹಗುರ ಕಾರು. ಇದನ್ನು ಫೈಬರ್ ಗ್ಲಾಸ್ ಬಳಸಿ ಉತ್ಪಾದಿಸಲಾಗುತ್ತದೆ. ಈ ಕಾರು ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಕುರಿತು ಕಾರಿನ ವಿನ್ಯಾಸಕರು ಭರವಸೆ ವ್ಯಕ್ತಪಡಿಸುತ್ತಾರೆ. ಇದು ಎಲೆಕ್ಟ್ರಾನಿಕ್ ಕಾರುಗಳಿಗಿಂತ ಅಗ್ಗವಾಗಿರಲಿದೆ. ಇದು ಸಿಟಿ ರಸ್ತೆ ಸವಾರಿಗೆ ಸೂಕ್ತವಾಗಿದೆ.
ಸದ್ಯದ ದುಬಾರಿ ಪೆಟ್ರೋಲ್ ಯುಗದಲ್ಲಿ ಗಾಳಿ, ನೀರು, ವೈನ್ ಗಳಿಂದ ಚಲಿಸೋ ಕಾರುಗಳಿಗೆ ಹೆಚ್ಚು ಬೇಡಿಕೆ ಕಾಣುವ ಕುರಿತು ಸಂಶಯಗಳಿಲ್ಲ. ಸದ್ಯ ಈ ಕಾರು ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲಿ ಉತ್ಪಾದನೆ ಹಂತಕ್ಕೆ ಪ್ರವೇಶಿಸಲಿ ಎಂದು ಪವನಪುತ್ರ ಹನುಮನನ್ನು ಪ್ರಾಥಿಸೋಣ.


Click it and Unblock the Notifications








