ಇಂಡಿಕಾ, ಇಂಡಿಗೊ ಹೊಸ ಟಿವಿ ಆಡ್ ಇಂದೇ ನೋಡಿ

"ಸಾರ್ 22 ಸಲ ಪೆಟ್ಟು ತಿಂದೆ. ಇನ್ನೂ ಟೇಕ್ ಆಗಿಲ್ಲ" ಅಂತ ನಾಯಕ ಅವಲತ್ತುಕೊಳ್ಳುತ್ತಾನೆ. ಅದಕ್ಕೆ ನಿರ್ದೇಶಕ ಇನ್ನೂ ಮೂರು ಸಲ ಪೆಟ್ಟು ತಿನ್ನಬೇಕು ಅನ್ನುತ್ತಾನೆ. ಅಂದರೆ ಟೇಕ್ ಓಕೆ ಆಗಲು 25 ಬೇಕು. ಇದು 25 ಕಿ.ಮೀ. ಮೈಲೇಜ್ ನೀಡೋ ಕಾರು ಟಾಟಾ ಇಂಡಿಕಾ ಇವಿ2 ಮತ್ತು ಟಾಟಾ ಇಂಡಿಗೊ ಇಸಿಎಸ್ ಹೊಸ ಜಾಹೀರಾತು!!
ಟಾಟಾ ಮೋಟರ್ಸ್ ಇಂತಹ ಸ್ಕ್ರಿಪ್ಟ್ ಇಟ್ಟುಕೊಂಡು ಜಾಹೀರಾತು ತಯಾರಿಸಿದೆ. ಅದು ಟಿವಿಗಳಲ್ಲಿ ನಾಳೆ(ಶನಿವಾರ)ಯಿಂದ ಬರಲಿದೆ. ಆದರೆ ನಮ್ಮ ವೆಬ್ ಸೈಟ್ ನಲ್ಲಿ ನೀವು ಇವತ್ತೇ ನೋಡಬಹುದು.
ಟಾಟಾ ಇಂಡಿಕಾ ಇವಿ2 ಮತ್ತು ಟಾಟಾ ಇಂಡಿಗೊ ಇಸಿಎಸ್ ಇಂಧನ ದಕ್ಷತೆಗೆ ಇನ್ನೊಂದು ಹೆಸರು. ನಾಳೆಯಿಂದ ನೀವು ಟಿವಿಯಲ್ಲಿ ಧಾರವಾಹಿ, ಚಲನಚಿತ್ರ, ಜ್ಯೋತಿಷ್ಯ ನೋಡುವಾಗ ಎಡೆಯಲ್ಲಿ ಟಾಟಾ ಜಾಹೀರಾತನ್ನು ನೋಡಬಹುದು.
ಟಾಟಾ ಇಂಡಿಕಾ ಇವಿ2: ಸದ್ಯ ರಸ್ತೆಯಲ್ಲಿರುವ ಕಾರ್ ಗಳೆಲ್ಲ ಅಬ್ಬಬ್ಬಾ ಅಂದ್ರೆ ಪ್ರತಿಲೀಟರ್ ಗೆ 20ರಿಂದ 21 ಕಿ.ಮೀ. ತಪ್ಪಿದರೆ 22 ಕಿ.ಮೀ. ಮೈಲೇಜ್ ನೀಡುತ್ತಿವೆ. ಟಾಟಾ ಮೋಟರ್ಸ್ ಸುಮಾರು 25 ಕಿ.ಮೀ. ಮೈಲೇಜ್ ನ ಕಾರೊಂದನ್ನು ಹೊರತಂದಿದೆ. ಅದರ ಹೆಸರು ಇಂಡಿಕಾ ಇವಿ2.
ಇಂಡಿಕಾ ಇವಿ2 ಸಣ್ಣ ಕಾರ್ ದುಬಾರಿಯೇನಲ್ಲ. ಇದರ ದರ 5 ಲಕ್ಷ ರೂ.ಗಿಂತ ಕಡಿಮೆಯಿದೆ. ಸಿಆರ್4 ಡೀಸಲ್ ಎಂಜಿನ್ ಕಾರಿಗೆ 3.95 ಲಕ್ಷ ರೂ.ನಿಂದ 4.77 ಲಕ್ಷ(ದೆಹಲಿ ಎಕ್ಸ್ ಶೋರೂಂ) ರೂ. ಮತ್ತು ಎಂಪಿಎಫ್ ಐ ಪೆಟ್ರೊಲ್ ಆವೃತ್ತಿ ದರ 2.95 ಲಕ್ಷ ರೂ. ಮತ್ತು 3.58 ಲಕ್ಷ ರೂ.ಗಳ ಆಸುಪಾಸಿನಲ್ಲಿದೆ.
ಟಾಟಾ ಇಂಡಿಗೊ ಇಸಿಎಸ್: ಇದು ಕೂಡ ಮೈಲೇಜ್ ಗೆ ಹೆಸರಾದ ಕಾರು. ಇಂಡಿಗೊ ಇಸಿಎಸ್ 9 ಆವೃತ್ತಿ, ಮೂರು ಎಂಜಿನ್ ಆಯ್ಕೆ ಮತ್ತು ಒಂದು ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ ದೊರಕುತ್ತಿದೆ. ಇದು ಜಿಎಲ್ಎಕ್ಸ್, ಎಲ್ ಎಸ್ ಟಿಡಿಐ, ಜಿವಿಎಕ್ಸ್, ಎಲ್ಎಸ್, ಎಲ್ ಎಕ್ಸ್ ಟಿಡಿಐ, ವಿಎಕ್ಸ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರ ಎಕ್ಸ್ ಶೋರೂಂ ದರ 4.53 ಲಕ್ಷ ರುಪಾಯಿಯಿಂದ ಆರಂಭವಾಗುತ್ತದೆ


Click it and Unblock the Notifications








