ಹ್ಯುಂಡೈ ಅಗ್ಗದ ಸಣ್ಣ ಕಾರು ಇಯಾನ್ ಬುಕ್ಕಿಂಗ್ ಸುರು

Hyundai Begins Eon Bookings Unofficially
ಹ್ಯುಂಡೈ ಮೋಟರ್ಸ್ ನ ಬಹುನಿರೀಕ್ಷಿತ ಸಣ್ಣಕಾರು ಇಯಾನ್ ಬುಕ್ಕಿಂಗ್ ಸುರುವಾಗಿದೆ. ಕಂಪನಿ ಈ ಕುರಿತು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಇದನ್ನು ನಮ್ಮ ಚೆನ್ನೈ ಪ್ರತಿನಿಧಿ ಖಚಿತಪಡಿಸಿದ್ದಾರೆ. ಎಚ್ 800 ಎಂದು ಕರೆಯುವ ಇಯಾನ್ ಕಾರು ಔಪಚಾರಿಕವಾಗಿ ಅಕ್ಟೋಬರ್ 14ರಂದು ರಸ್ತೆಗಿಳಿಯಲಿದೆ. ಆದರೆ ಡೀಲರುಗಳು ಈಗಾಗಲೇ ಬುಕ್ಕಿಂಗ್ ಸುರುಮಾಡಿದ್ದಾರೆ.

ಹ್ಯುಂಡೈ ಇಯಾನ್ ಮಾರುತಿ ಸುಜುಕಿ ಆಲ್ಟೊಗೆ ಪ್ರತಿಸ್ಪರ್ಧಿ ಎನ್ನಲಾಗಿದೆ. ಇಯಾನ್ ರಸ್ತೆಗಿಳಿಯುವ ಹದಿನೈದು ದಿನ ಮುನ್ನವೇ ಡೀಲರುಗಳು ಬುಕ್ಕಿಂಗ್ ಆರಂಭಿಸಿದ್ದಾರೆ. ಇದು ಮಾರುತಿ 800 ಕಾರಿನಂತೆ ಜನಪ್ರಿಯವಾಗುವ ನಿರೀಕ್ಷೆ ಕಂಪನಿಗಿದೆ.

ನಮ್ಮ ಪ್ರತಿನಿಧಿ ಹಲವು ಡೀಲರುಗಳ ಬಳಿ ಮಾತನಾಡಿದ್ದಾರೆ. ವಿವಿಧ ಡೀಲರುಗಳು ವಿಧಿಸುವ ಬುಕ್ಕಿಂಗ್ ಶುಲ್ಕ ಕೂಡ ವಿಭಿನ್ನವಾಗಿದೆ. ಒಬ್ಬ ಡೀಲರು 5 ಸಾವಿರ ರು.ಗೆ ಬುಕ್ಕಿಂಗ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಮತ್ತೊಂದು ಡೀಲರ್ ಬಳಿ ಬುಕ್ಕಿಂಗ್ ಶುಲ್ಕ 25 ಸಾವಿರ ರುಪಾಯಿ.

ನೂತನ ಇಯಾನ್ ಟಾಪ್ ಎಂಡ್ ಕಾರಿನ ಆನ್ ರೋಡ್ ದರ 3.5 ಲಕ್ಷ ರುಪಾಯಿ. ಬೇಸ್ ಆವೃತ್ತಿ ಆನ್ ರೋಡ್ ದರ ಸುಮಾರು 3 ಲಕ್ಷ ರುಪಾಯಿ. ಶೋರೂಂ ದರ ಮೂರು ಲಕ್ಷ ರು.ಗಿಂತ ಕಡಿಮೆ ಇರಲಿದೆ ಎಂದು ನಮ್ಮ ಪ್ರತಿನಿಧಿ ಹೇಳಿದ್ದಾರೆ.

ಹ್ಯುಂಡೈ ಇಯಾನ್ ಮಾರುತಿ 800 ಸ್ಥಾನ ತುಂಬುವ ನಿರೀಕ್ಷೆಯಿದೆ. ಯಾಕೆಂದರೆ ನೂತನ ಕಾರು 800 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಮಾರುತಿ ಸುಜುಕಿ ಕೂಡ 800 ಸಿಸಿಯ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

More from DriveSpark

Article Published On: Saturday, October 1, 2011, 10:48 [IST]
English summary
Hyundai Motors dealers have unofficially started taking bookings for the new Eon small car according to reports from our corespondent in Chennai. Eon is expected to be launched in India on 14th October but dealers have already begun talking to customers about the new small car. The on road price of the Hyundai eon small car is reported to be Rs.3.5 lakhs for the top end model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+